ನವದೆಹಲಿ, ನ.20 (DaijiworldNews/PY): ಎರಡು ತಿಂಗಳ ನಂತರ ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲಿ ಪುನಃ ಏರಿಕೆಯಾಗಿದೆ.
ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ ಪೈಸೆ ಹಾಗೂ ಡೀಸೆಲ್ ಬೆಲೆ 22 ಪೈಸೆ ಹೆಚ್ಚಳವಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ ರೂ. 81.06 ರಿಂದ ರೂ. 81.23 ರೂ ಇದ್ದರೆ, ಡೀಸೆಲ್ಗೆ 70.46 ರೂ ನಿಂದ ರೂ. 70.68 ಗಳಿಗೆ ಏರಿಕೆಯಾಗಿದೆ.ಮುಂಬೈನಲ್ಲಿ ಪೆಟ್ರೋಲ್ ದರ ಲೀ.ಗೆ 87.74 ರೂ.ನಿಂದ 87.92 ರೂ. ಹಾಗೂ ಡೀಸೆಲ್ಗೆ 76.86 ರೂ.ನಿಂದ 77.11 ರೂ.ಗೆ ಹೆಚ್ಚಿಸಲಾಗಿದೆ.
ಇನ್ನು ಚೆನ್ನೈನಲ್ಲಿ ಪೆಟ್ರೋಲ್ ದರ 84.31 ರೂ. ಹಾಗೂ ಡೀಸೆಲ್ಗೆ ರೂ. 76.17 ರೂ ಏರಿಸಲಾಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ 82.79 ರೂ ಇದ್ದರೆ, ಡೀಸೆಲ್ಗೆ 74.24ರೂ ಇದೆ.