ನವದೆಹಲಿ, ನ.20 (DaijiworldNews/PY): "ಕೊರೊನಾ ಸಂಕಷ್ಟದ ಸಂದರ್ಭ ಭೂತಾನ್ನೊಂದಿಗೆ ಭಾರತವು ದೃಢವಾಗಿ ನಿಂತಿದೆ. ನೆರೆಯ ದೇಶದ ಅವಶ್ಯಕತೆಗಳನ್ನು ಪೂರೈಸುವುದೇ ನಮ್ಮ ಮೊದಲ ಪ್ರಾಶಸ್ತ್ಯ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭೂತಾನ್ ಕಾರ್ಡ್ಗಳನ್ನು ಹೊಂದಿರುವವರು ಭಾರತದಲ್ಲಿ ರುಪೇ ನೆಟ್ವರ್ಕ್ ಅನ್ನು ಪ್ರವೇಶಿಸುವ ಸಲುವಾಗಿ ಅನುವು ಮಾಡಿಕೊಡುವಂತ ರುಪೇ ಕಾರ್ಡ್-2ನೇ ಹಂತವನ್ನು ಪ್ರಧಾನಿ ಮೋದಿ ಹಾಗೂ ಭೂತಾನ್ ಪ್ರಧಾನಿ ಲೋತಾಯ್ ತ್ಸೆರಿಂಗ್ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಪ್ರಧಾನಿ ಮೋದಿ ಅವರು, "ಭಾರತ ಹಾಗೂ ಭೂತಾನ್ ವಿಶೇಷವಾದ ಪಾಲುದಾರಿಕೆಯನ್ನು ಹಂಚಿಕೊಳ್ಳುತ್ತವೆ. ಅಲ್ಲದೇ, ಸಾಂಸ್ಕೃತಿಕ ಪರಂಪರೆ ಹಾಗೂ ಜನರ ಮಧ್ಯೆ ಬಲಿಷ್ಠ ಸಂಪರ್ಕವನ್ನು ಹೊಂದಿದೆ" ಎಂದಿದ್ದಾರೆ.
ಪ್ರಧಾನಿ ಮೋದಿ ಅವರು ಕಳೆದ ವರ್ಷ ಆಗಸ್ಟ್ನಲ್ಲಿ ಭೂತಾನ್ಗೆ ಭೇಟಿ ನೀಡಿದ್ದ ಸಂದರ್ಭ ಉಭಯ ದೇಶದ ಪ್ರಧಾನ ಮಂತ್ರಿಗಳು ರುಪೇ ಕಾರ್ಡ್ ಯೋಜನೆಯ ಮೊದಲ ಹಂತಕ್ಕೆ ಚಾಲನೆ ನೀಡಿದ್ದರು.