ಜೈಪುರ, ನ.20 (DaijiworldNews/HR): ದೇಶವನ್ನು ಒಡೆಯಲು ಮತ್ತು ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡಲು ಬಿಜೆಪಿ ಸೃಷ್ಟಿಸಿದ ಪದ 'ಲವ್ ಜಿಹಾದ್' ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಜೆಪಿಯು ದೇಶವನ್ನು ಒಡೆಯುವ ಸಲುವಾಗಿ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡಲು 'ಲವ್ ಜಿಹಾದ್' ಎಂಬ ಪದವನ್ನು ಬಳಕೆ ಮಾಡಿತ್ತಿದೆ. ಮದುವೆಯು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರ. ಅದಕ್ಕೆ ನಿರ್ಬಂಧ ವಿಧಿಸಲು ಕಾನೂನು ರೂಪಿಸುವುದು ಸಾಂವಿಧಾನಿಕ ರೀತಿಯಲ್ಲಿ ತಪ್ಪು, ಇದು ಯಾವ ನ್ಯಾಯಾಲಯದಲ್ಲೂ ಒಪ್ಪಿತವಾಗದು. ಪ್ರೀತಿಯಲ್ಲಿ ಜಿಹಾದ್ಗೆ ಸ್ಥಾನವಿಲ್ಲ ಎಂದು ಹೇಳಿದ್ದಾರೆ.
ಇನ್ನು ವಯಸ್ಕರ ನಡುವಣ ಸಮ್ಮತಿಗೆ ಸರ್ಕಾರದ ಅನುಮತಿ ಅಗತ್ಯ ಎನ್ನುವಂಥ ವಾತಾವರಣವನ್ನು ಬಿಜೆಪಿ ಸೃಷ್ಟಿಸುತ್ತಿದ್ದಾರೆ. ವೈಯಕ್ತಿಕ ನಿರ್ಧಾರವಾದ ಮದುವೆಯ ಮೇಲೆ ಅವರು ನಿರ್ಬಂಧ ವಿಧಿಸುತ್ತಿದ್ದಾರೆ ಎಂದರು.