ಗದಗ,ನ.20 (DaijiworldNews/HR): ಪಶುಸಂಗೋಪನೆ ಹಾಗೂ ವಕ್ಫ್ ಇಲಾಖೆ ಸಚಿವ ಪ್ರಭು ಚವ್ಹಾಣ್ ಅವರು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ವಿರುದ್ಧ ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು,ಅಜಿತ್ ಪವಾರ್ ಗೆ ತಲೆನೇ ಇಲ್ಲ, ಅವನೊಬ್ಬ ಡಬಲ್ ಗೇಮ್ ವ್ಯಕ್ತಿ ಎಂದು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಜಿತ್ ಪವಾರ್ ಅವರು ಕರ್ನಾಟಕದ ಜಾಗ ನಮ್ಮದು ಎಂದು ಹೇಳುತ್ತಿದ್ದಾರೆ ಈ ಹೇಳಿಕೆ ಅವರ ದಡ್ಡತನದ ಪರಮಾವಧಿ. ರಾತ್ರೋರಾತ್ರಿ ನಾಯಕನಾದವನು ಕರ್ನಾಟಕದ ಗಡಿ ಬಗ್ಗೆ ಸಾಂಗ್ಲಿ, ಸೊಲ್ಲಾಪುರಕ್ಕೆ ಬಂದು ಮಾತನಾಡುತ್ತೇನೆ ಎನ್ನುತ್ತಿದ್ದಾರೆ. ಧೈರ್ಯವಿದ್ದರೆ ಕರ್ನಾಟಕಕ್ಕೆ ಬಂದು ಮಾತನಾಡಲಿ ಎಂದರು.
ಇನ್ನು ಅಜಿತ್ ಪವಾರ್ ಅವರದ್ದು ಸದಾ ಬೆಂಕಿ ಹಚ್ಚುವ ಕೆಲಸ. ಕರ್ನಾಟಕದ ಒಂದಿಂಚೂ ನೆಲವನ್ನು ಕೂಡ ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದಾರೆ.