ಅಮರಾವತಿ, ನ.20 (DaijiworldNews/HR): ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ಒಟ್ಟು 25 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಟಿಡಿಪಿ ಮುಖಂಡ, ಗುರಾಝಾಲಾ ಕ್ಷೇತ್ರದ ಮಾಜಿ ಶಾಸಕ ಯರಪತಿನೇನಿ ಶ್ರೀನಿವಾಸ್ ರಾವ್ ಹಾಗೂ ಇತರರ ಮನೆ ಮತ್ತು ಕಚೇರಿಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಸಿಬಿಐಗೆ ಮಹತ್ವದ ಮಾಹಿತಿಯನ್ನೊಳಗೊಂಡ ದಾಖಲೆ, ಮೊಬೈಲ್ ಫೋನ್ ಗಳು ಹಾಗೂ ನಗದನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಬೇಕೆಂದು ಆಂಧ್ರಪ್ರದೇಶ ಸಿಬಿ-ಸಿಐಡಿ ಮಾಡಿಕೊಂಡ ಮನವಿ ಮಾಡಿದ ಬಳಿಕ ರಾಜ್ಯ ಸರ್ಕಾರ ಕೇಂದ್ರಕ್ಕೆ ರವಾನಿಸಿದ್ದು, ಅದನ್ನು ಅಂಗೀಕರಿಸಿದ ನಂತರ ಸಿಬಿಐ 17 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು ಎಂದು ವರದಿ ತಿಳಿಸಿದೆ.