ಕೋಲ್ಕತ್ತಾ,ನ.19 (DaijiworldNews/HR): ತೃಣ ಮೂಲ ಕಾಂಗ್ರೆಸ್ ನ ಕಾರ್ಯಕರ್ತ ಆಕಾಶ್ ಪ್ರಸಾದ್ (22)ನನ್ನು ಚೂರಿ ಇರಿದು ಹತ್ಯೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ ಪರಗಣಾಸ್ ಜಿಲ್ಲೆಯಲ್ಲಿ ನಡೆದಿದೆ.
ಹಲವುಬಾರಿ ಚೂರಿ ಇರಿದಿದ್ದು ಮಾತ್ರವಲ್ಲದೆ, ಆತನ ಮೇಲೆ ಕಚ್ಚಾ ಬಾಂಬ್ ಎಸೆದು ದಾಳಿ ನಡೆಸಲಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಆತ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ಈ ಘಟನೆ ಪಕ್ಷದ ಕಾರ್ಯಕರ್ತರಿಗೆ ಭಯ ಹುಟ್ತಿಸುವುದಕ್ಕಾಗಿ ಬಿಜೆಪಿ ಮಾಡಿಸಿದ್ದು, ಇದ್ದಕ್ಕೆ ಬಿಜೆಪಿ ದ್ವೇಷಹೊಣೆ ಎಂದು ಟಿಎಂಸಿ ಆರೋಪ ಮಾಡಿದೆ.