ಹೊಸದಿಲ್ಲಿ, ನ.19 (DaijiworldNews/HR): ಮುಂಬರುವ ಮೂರ್ನಾಲ್ಕು ತಿಂಗಳೊಳಗೆ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮುಂದಿನ ಮೂರರಿಂದ ನಾಲ್ಕು ತಿಂಗಳಲ್ಲಿ ಕೊರೊನಾ ಲಸಿಕೆ ಸಿದ್ದವಾಗಲಿದೆ ಎಂಬ ವಿಶ್ವಾಸವಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಕೊರೊನಾ ವಾರಿಯರ್ಸ್ ಗಳಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುವುದು ಎಂದರು.
ಇನ್ನು ಕೊರೊನಾ ಲಸಿಕೆ ಸಿದ್ದವಾದ ಬಳಿಕ ಅದನ್ನು ದೇಶದೆಲ್ಲೆಡೆ ಸರಬರಾಜು ಮಾಡಲು ವ್ಯವಸ್ಥಿತ ಯೋಜನೆಯನ್ನು ನಾವು ರೂಪಿಸುತ್ತಿದ್ದು, ದೇಶದ 25-30 ಕೋಟಿ ಜನರಿಗೆ ಡೋಸ್ ಗಳು ಲಭ್ಯವಾಗಿರಲಿದೆ. ಲಸಿಕೆ ಹಂಚುವಾಗ ಆರೋಗ್ಯ ಕಾರ್ಯಕರ್ತರು ಮತ್ತು ಕೊರೊನಾ ವಾರಿಯರ್ಸ್ ಗಳ ಜೊತೆಗೆ ಅಗತ್ಯ ಇರುವ ರೋಗಿಗಳಿಗೆ ಮೊದಲಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.