ಮಂಡ್ಯ,ನ.19 (DaijiworldNews/HR): ಮಹಿಳೆಯೊಬ್ಬರನ್ನು ಭೀಕರವಾಗಿ ಹತ್ಯೆಗೈದು ಅಂಗಾಂಗಗಳನ್ನು ಕತ್ತರಿಸಿ ಹೇಮಾವತಿ ನದಿಗೆ ಎಸೆದಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆಯಲ್ಲಿ ನಡೆದಿದೆ.
ಅಪರಿಚಿತ ಮಹಿಳೆಯ ಮೃತ ದೇಹ, ತಲೆ ಮತ್ತು ಅಂಗಾಂಗಗಳು ಪತ್ತೆಯಾಗಿದ್ದು, ದುಷ್ಕರ್ಮಿಗಳು ಹತ್ಯೆ ಮಾಡಿ ಅಂಗಾಂಗಗಳನ್ನ ಕತ್ತರಿಸಿ ನದಿಗೆ ಎಸೆದಿದ್ದಾರೆ.
ಇನ್ನು ಈ ಕೃತ್ಯ ಎರಡು ದಿನಗಳ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಮೊದಲು ಸ್ಥಳೀಯರಿಗೆ ದೇಹ ಮಾತ್ರ ಕಂಡು ಬಂದಿದೆ. ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶೋಧ ನಡೆಸಿದಾಗ ಉಳಿದ ಅಂಗಾಂಗಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.