ನವದೆಹಲಿ, ನ.19 (DaijiworldNews/PY): ಭಾರತದ ಪ್ರಪ್ರಥಮ ಮಹಿಳಾ ಪ್ರಧಾನಿ ಎಂದು ಖ್ಯಾತಿ ಪಡೆದಿರುವ ಇಂದಿರಾ ಗಾಂಧಿ ಅವರ 103ನೇ ಜಯಂತಿ ಇಂದು. ಈ ಹಿನ್ನೆಲೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರು, ನಾಯಕರು ಇಂದಿರಾ ಗಾಂಧಿ ಅವರನ್ನು ಸ್ಮರಿಸಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು, "ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮ ದಿನದಂದು ಅವರಿಗೆ ನಮಸ್ಕಾರಗಳು" ಎಂದಿದ್ದಾರೆ.
ಕಾಂಗ್ರೆಸ್ ಟ್ವೀಟ್ ಮಾಡಿದ್ದು, "ದೂರದೃಷ್ಟಿ, ನಿಜವಾದ ನಾಯಕತ್ವ, ಹಾಗೂ ನಮ್ಮ ತಾಯ್ನಾಡಿನ ಮಗಳಾದ ಇಂದಿರಾ ಗಾಂಧಿ ಅವರು ನಮ್ಮ ದೇಶದ ನಾಗರಿಕರಿಗೆ ಪ್ರಧಾನ ಮಂತ್ರಿಗಿಂತ ಹೆಚ್ಚಿನವರಾಗಿದ್ದರು. ಅವರು ಶ್ರೇಷ್ಠತೆ ಹಾಗೂ ಸಮೃದ್ಧಿಯ ಅನ್ವೇಷಣೆಯಲ್ಲಿ ಪುನರುಜ್ಜೀವನಗೊಳಿಸುವಂತ ಶಕ್ತಿಯಾಗಿದ್ದರು. ಇಂದು ನಾವು ಹೆಮ್ಮೆಯಿಂದ ಇಂದಿರಾ ಗಾಂಧಿ ಅವರಿಗೆ ಗೌರವ ಸಲ್ಲಿಸುತ್ತೇವೆ" ಎಂದು ತಿಳಿಸಿದೆ.