ನವದೆಹಲಿ, ನ. 19 (DaijiworldNews/MB) : ದೇಶ ಕೊರೊನಾ ಮರಣ ದರದಲ್ಲಿ ಮುಂಚೂಣಿ, ಜಿಡಿಪಿಯಲ್ಲಿ ಅಂತ್ಯ, ಇದು ಮೋದಿ ಸರ್ಕಾರದ ರಿಪೋರ್ಟ್ ಕಾರ್ಡ್ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಜಿಡಿಪಿ ಕುಸಿತ ವಿಚಾರದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ ಕೊರೊನಾ ಮರಣ ದರವನ್ನು ಉಲ್ಲೇಖಿಸಿ ಮೋದಿಯವರನ್ನು ಲೇವಡಿ ಮಾಡಿದ್ದಾರೆ.
ರಾಹುಲ್ ಗಾಂಧಿಯವರು ಉಲ್ಲೇಖಿಸಿರುವ ವರದಿಯ ಪ್ರಕಾರ ದೇಶದಲ್ಲಿ ಪ್ರತಿ ದಶ ಮಿಲಿಯನ್ ವ್ಯಕ್ತಿಯಲ್ಲಿ 95 ಜನರು ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಾರೆ.
ಈ ವರದಿಯ ಪ್ರತಿಯನ್ನು ಉಲ್ಲೇಖ ಮಾಡಿರುವ ರಾಹುಲ್ ಗಾಂಧಿಯವರು, ''ಮೋದಿ ಸರ್ಕಾರದ ರಿಪೋರ್ಟ್ ಕಾರ್ಡ್. ಕೊರೊನಾ ಮರಣ ದರದಲ್ಲಿ ಮುಂಚೂಣಿ ಎಂದು ಜಿಡಿಪಿ ದರದಲ್ಲಿ ಅಂತ್ಯದಲ್ಲಿ'' ಎಂದು ಹೇಳಿದ್ದಾರೆ.