ಬೆಂಗಳೂರು, ನ.19 (DaijiworldNews/PY): "ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಪಕ್ಷದ ವರಿಷ್ಠರ ಬಳಿ ಚರ್ಚೆ ನಡೆಸಿ ಬಂದಿದ್ದೇನೆ. ಈ ವಿಚಾರವಾಗಿ ದೆಹಲಿಯಿಂದ ಎರಡು ಮೂರು ದಿನಗಳಲ್ಲಿ ಪಟ್ಟಿ ಬರಬಹುದು ಎನ್ನುವ ನಿರೀಕ್ಷೆ ಇದೆ" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.
ಗುರುವಾರ ಸಿಎಂ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಹೊಯ್ಸಳ ಕ್ಯಾಬ್ ಸೇವೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, "ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಪಕ್ಷದ ವರಿಷ್ಠರ ಬಳಿ ಮಾತನಾಡಿದ್ದೇನೆ. ಇನ್ನು ಎರಡು, ಮೂರು ದಿನಗಳಲ್ಲಿ ದೆಹಲಿಯಿಂದ ಪಟ್ಟಿ ಬರಬಹುದು ಎನ್ನುವ ನಿರೀಕ್ಷೆ ಇದೆ. ಇದಾದ ಬಳಿಕವೇ ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ" ಎಂದಿದ್ದಾರೆ.
"ಕನ್ನಡತಿ ಉಮಾಶಂಕರ್ ಅವರು ಆಪ್ ಆಧಾರಿ ಹೊಯ್ಸಳ ಕ್ಯಾಬ್ ಸೇವೆಯನ್ನು ಪ್ರಾರಂಭ ಮಾಡಿರುವುದು ಉತ್ತಮ ಕಾರ್ಯ. ಇದು ಇಲ್ಲಿಯವರೆಗೆ ಕೇವಲ ನಗರಗಳಿಗೆ ಮಾತ್ರವೇ ಸೀಮಿತವಾಗಿತ್ತು. ಇನ್ನು ರಾಜ್ಯದಲ್ಲಿನ ಎಲ್ಲಾ ಭಾಗಗಳಿಗೂ ಲಭ್ಯವಾಗಲಿದೆ" ಎಂದು ತಿಳಿಸಿದ್ದಾರೆ.
"ಹೊಯ್ಸಳ ಕ್ಯಾಬ್ ಸೇವೆಯು 5,000 ಕ್ಯಾಬ್ಗಳೊಂದಿಗೆ ಪ್ರಾರಂಭವಾಗುತ್ತಿದ್ದು, ಈ ಸೇವೆಯಿಂದ ಸುಮಾರು 5,000 ಜನರಿಗೆ ಉದ್ಯೋಗ ಸಿಗಲಿದೆ" ಎಂದಿದ್ದಾರೆ.