ನವದೆಹಲಿ,ನ.19 (DaijiworldNews/HR): ಲಡಾಖ್ ಚೀನಾದ ಭೂಭಾಗವಾಗಿದೆ ಎಂದು ತಪ್ಪಾಗಿ ತೋರಿಸಿದ್ದಕ್ಕಾಗಿ ಟ್ವೀಟರ್ ಜಂಟಿ ಸಂಸದೀಯ ಸಮಿತಿಗೆ ಲಿಖಿತ ರೂಪದ ಕ್ಷಮೆ ಕೋರಿ, ತಿಂಗಳ ಅಂತ್ಯದ ವೇಳೆಗೆ ದೋಷವನ್ನು ಸರಿಪಡಿಸುವುದಾಗಿ ಭರವಸೆ ನೀಡಿದೆ ಎಂದು ಸಮಿತಿಯ ಅಧ್ಯಕ್ಷೆ ಮೀನಾಕ್ಷಿ ಲೇಖಿ ತಿಳಿಸಿದ್ದಾರೆ.
ಲಡಾಕ್ ಅನ್ನು ಚೀನಾದ ಭಾಗವಾಗಿ ತೋರಿಸಿದ್ದಕ್ಕಾಗಿ ಸಂಸತ್ನ ದತ್ತಾಂಶ ಸಂರಕ್ಷಣಾ ಜಂಟಿ ಸಮಿತಿಯು ಟ್ವೀಟರ್ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದು, ಇದು ದೇಶದ್ರೋಹ ಕೃತ್ಯವಾಗಿದ್ದು, ಅಮೇರಿಕಾ ಮೂಲದ ಟ್ವೀಟರ್ ಅಫಿಡವಿಟ್ ರೂಪದಲ್ಲಿ ವಿವರಣೆ ನೀಡಬೇಕು ಎಂದು ಹೇಳಿತ್ತು.
ಇನ್ನುಸಮಿತಿಯ ಎದುರು ಹಾಜರಾಗಿದ್ದ ಟ್ವೀಟರ್ ಇಂಡಿಯಾದ ಪ್ರತಿನಿಧಿಗಳು ಕ್ಷಮೆ ಕೋರಿದ್ದರು. ಆದರೆ ಸಮಿತಿಯು ಟ್ವೀಟರ್ ಇಂಡಿಯಾದಿಂದಲೇ ನೇರವಾಗಿ ಅಫಿಡವಿಟ್ ಸಲ್ಲಿಸಬೇಕು ಹೊರತು ಅದರ ಮಾರುಕಟ್ಟೆ ವಿಭಾಗದಿಂದ ಎಂದು ಹೇಳಿದ್ದು, ಅದರಂತೆ ಈಗ ಅಫಿಡವಿಟ್ ಮೂಲಕ ಕ್ಷಮೆ ಕೋರಲಾಗಿದೆ.