ಬೆಂಗಳೂರು, ನ. 19 (DaijiworldNews/MB) : ರಾಜ್ಯದಲ್ಲಿ ಆರೋಗ್ಯ ಇಲಾಖೆ ಬುಧವಾರ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ ಕೊರೊನಾ ದಿನದಲ್ಲಿ ದಾಖಲಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಗಿಂತ ಕೊರೊನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೇ ಅಧಿಕವಾಗಿದೆ. ರಾಜ್ಯದಲ್ಲಿ 1,791 ಮಂಗಳವಾರ 1,791 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು 1,947 ಮಂದಿ ಗುಣಮುಖರಾಗಿದ್ದಾರೆ.
ಬುಧವಾರ ನೀಡಿರುವ ಬುಲೆಟಿನ್ ಪ್ರಕಾರ, ಮಂಗಳವಾರ 1,947 ಮಂದಿ ಗುಣಮುಖರಾಗಿದ್ದು ರಾಜ್ಯದಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾದವ ಸಂಖ್ಯೆ 8,29,188 ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯದಲ್ಲಿ ಮಂಗಳವಾರ 1,791 ಹೊಸ ಪ್ರಕರಣಗಳು ದಾಖಲಾಗಿದ್ದು ಸೋಂಕಿತರ ಸಂಖ್ಯೆ 8,65,931 ಕ್ಕೆ ಏರಿದೆ. ಪ್ರಸ್ತುತ 25,146 ಪ್ರಕರಣಗಳು ಸಕ್ರಿಯವಾಗಿದೆ.
ಇನ್ನು ಮಂಗಳವಾರ ರಾಜ್ಯದಲ್ಲಿ 21 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದು ಸೋಂಕಿಗೆ ಬಲಿಯಾದವರ ಸಂಖ್ಯೆ 11,578 ಗೆ ತಲುಪಿದೆ.
ಇನ್ನು ರಾಜ್ಯದಲ್ಲಿ ಕೊರೊನಾ ಸೋಂಕಿನ ಕೇಂದ್ರಬಿಂದುವಾಗಿರುವ ಬೆಂಗಳೂರಿನಲ್ಲಿ 933 ಹೊಸ ಪ್ರಕರಣಗಳು ದಾಖಲಾಗಿದ್ದು, 17,703 ಸಕ್ರಿಯ ಪ್ರಕರಣಗಳು ಸೇರಿದಂತೆ ಈವರೆಗೆ 3,59,539 ಮಂದಿಗೆ ಸೋಂಕು ದೃಢಪಟ್ಟಿದೆ. ಆದರೆ ಕಳೆದ 24 ಗಂಟೆಗಳಲ್ಲಿ 927 ಮಂದಿ ಗುಣಮುಖರಾಗಿದ್ದು ಈವರೆಗೆ 3,37,807 ಚೇತರಿಸಿಕೊಂಡಿದ್ದಾರೆ. ಮಂಗಳವಾರ 10 ಮಂದಿ ಸೋಂಕಿಗೆ ಬಲಿಯಾಗಿದ್ದು ನಗರದಲ್ಲಿ ಸಾವಿನ ಸಂಖ್ಯೆ 4,028 ಕ್ಕೆ ಏರಿದೆ.
ರಾಜ್ಯಾದ್ಯಂತ ತೀವ್ರ ನಿಗಾ ಘಟಕಗಳಲ್ಲಿ (ಐಸಿಯು) 636 ರೋಗಿಗಳಿದ್ದು ಈ ಪೈಕಿ ಬೆಂಗಳೂರು ಜಿಲ್ಲೆಯಲ್ಲಿ 320 ಮಂದಿ, ಮೈಸೂರಿನಲ್ಲಿ 32, ತುಮಕೂರಿನಲ್ಲಿ 28 ಮತ್ತು ಕಲಬುರಗಿಯಲ್ಲಿ 26 ರೋಗಿಗಳಿದ್ದಾರೆ.