ಬೆಳಗಾವಿ, ನ. 18 (DaijiworldNews/MB) : ''ಮಹಾರಾಷ್ಟ್ರದವರ ಮಾತಿಗೆ ಯಾವುದೇ ಬೆಲೆ ಕೊಡಬೇಕಾಗಿಲ್ಲ'' ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಗೆಕೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿರುಗೇಟು ನೀಡಿದರು.
''ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು'' ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿರುವ ಸೋಮಶೇಖರ್, ''ನಾವು ಮಹಾರಾಷ್ಟ್ರದವರ ಮಾತಿಗೆ ಯಾವ ಬೆಲೆ ಕೊಡುವ ಅಗತ್ಯವಿಲ್ಲ. ಅವರು ರಾಜಕೀಯ ದುರುದ್ದೇಶದಿಂದ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಹಾಗಿರುವಾಗ ಈ ರೀತಿಯ ಹೇಳಿಕೆಗಳಿಗೆ ಕಿಮ್ಮತ್ತು ಕೊಡಬಾರದು. ಅವರು ಇಂತಹ ಹೇಳಿಕೆ ಕೊಡುತ್ತಲ್ಲೇ ಇರುತ್ತಾರೆ'' ಎಂದು ಹೇಳಿದರು.
ಇನ್ನು ಈ ವೇಳೆ ಸರ್ಕಾರದಲ್ಲಿ ಗಡಿ ಉಸ್ತುವಾರಿ ಸಚಿವ ನೇಮಕ ಮಾಡಿಲ್ಲವೇಕೆ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ''ಬೆಳಗಾವಿ ಜಿಲ್ಲೆಯವರೇ ಆದ ನಾಲ್ವರು ಸಚಿವರು ಇದ್ದಾರೆ. ಎಲ್ಲರ ವಿಶ್ವಾಸ ಪಡೆದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀರ್ಮಾನ ಮಾಡುತ್ತಾರೆ'' ಎಂದರು.