ಶ್ರೀನಗರ, ನ.18 (DaijiworldNews/PY): "ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ವ್ಯಾಪ್ತಿಯಲ್ಲಿ ಹಿಮಪಾತ ಸಂಭವಿಸಿದ್ದರಿಂದ ಓರ್ವ ಯೋಧ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ" ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
"ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ತಂಗ್ಧಾರ್ ಪ್ರದೇಶದ ರೋಶನ್ ಪೋಸ್ಟ್ನಲ್ಲಿರುವ ಎಲ್ಒಸಿ ಬಳಿ ಮಂಗಳವಾರ ರಾತ್ರಿ ಹಿಮಪಾತ ಸಂಭವಿಸಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
"ಘಟನೆಯ ಪರಿಣಾಮ ಮೂವರು ಸೈನಿಕರು ಕೊಚ್ಚಿ ಹೋಗಿದ್ದು, ಸೈನಿಕರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಈ ಪೈಕಿ ನಿಖಿಲ್ ಶರ್ಮಾ ಎಂಬವರು ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ರಮೇಶ್ ಚಂದ್ ಹಾಗೂ ಗುರ್ವಿಂದರ್ ಸಿಂಗ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಅಧಿಕಾರಿಗಳ ತಿಳಿಸಿದ್ದಾರೆ.