ಚೆನ್ನೈ, ನ.18 (DaijiworldNews/PY): ತಮಿಳುನಾಡು ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ನ.18ರ ಬುಧವಾರ ಬೆಳಗ್ಗೆ ಮೇಲ್ಮರವತ್ತೂರ್ನಲ್ಲಿ ನಡೆದಿದೆ.
ಖುಷ್ಬೂ ಸುಂದರ್ ಅವರ ಕಾರಿಗೆ ಮೇಲ್ಮರವತ್ತೂರ್ನ ಸಮೀಪ ಟ್ಯಾಂಕರ್ ಗುದ್ದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಖುಷ್ಬೂ ಸುಂದರ್ ಅವರು ಕಡಲೂರು ಕಡೆಗೆ ಪ್ರಯಾಣ ಮುಂದುವರೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಖುಷ್ಬೂ ಅವರು, "ಮೇಲ್ಮರವತ್ತೂರ್ ಬಳಿ ನಮ್ಮ ಕಾರಿಗೆ ಟ್ಯಾಂಕರ್ ಕಾರಿಗೆ ಗುದ್ದಿದೆ. ನಮ್ಮ ಕಾರು ಸರಿಯಾದ ಮಾರ್ಗದಲ್ಲಿಯೇ ಚಲಿಸುತ್ತಿತ್ತು. ಆದರೆ, ಟ್ಯಾಂಕರ್ ಏಕಾಏಕಿ ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ" ಎಂದು ತಿಳಿಸಿದ್ದಾರೆ.
"ನಿಮ್ಮೆಲ್ಲರ ಆಶೀರ್ವಾದ ಹಾಗೂ ದೇವರ ಕೃಪೆಯಿಂದ ನಾನು ಸುರಕ್ಷಿತವಾಗಿದ್ದೇನೆ. ನಾನು ಕಡಲೂರು ಕಡೆಗೆ ಪ್ರಯಾಣ ಮುಂದುವರೆಸಿದ್ದೇನೆ" ಎಂದಿದ್ದಾರೆ.