ನವದೆಹಲಿ, ನ.18 (DaijiworldNews/PY): ಚೀನಾವು, ಲಡಾಕ್ ಗಡಿಯಲ್ಲಿ ಭಾರತೀಯ ಸೇನೆಯನ್ನು ಸೋಲಿಸುವ ಸಲುವಾಗಿ ಮೈಕ್ರೊವೇವ್ ಶಸ್ತ್ರಾಸ್ತ್ರಗಳನ್ನು ಉಪಯೋಗ ಮಾಡುತ್ತಿದೆ ಎಂದು ಚೀನಾದ ಪ್ರಾಧ್ಯಾಪಕರೋರ್ವರ ಮಾತನ್ನು ಭಾರತ ತಳ್ಳಿಹಾಕಿದ್ದು, "ಚೀನಾವು ಮೈಕ್ರೊವೇವ್ ಶಸ್ತ್ರಾಸ್ತ್ರಗಳ ಉಪಯೋಗದ ವಿಚಾರವಾಗಿ ಸುಳ್ಳು ಸುದ್ದಿ ಪ್ರಚಾರ ಮಾಡುತ್ತಿದೆ" ಎಂದು ಹೇಳಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಭಾರತೀಯ ಸೇನೆ, "ಇದು ಚೀನಾ ಬಿತ್ತುತ್ತಿರುವ ಸುದ್ದಿ ಸುಳ್ಳು. ಇಂತಹ ಕಾರ್ಯ ಮಾಡುತ್ತಿರುವುದು ಚೀನಾದ ಬಡ ಬುದ್ಧಿಹೀನರು. ಲಡಾಕ್ನಲ್ಲಿ ಈ ರೀತಿಯಾದ ಯಾವುದೇ ಘಟನೆಗಳು ನಡೆದಿಲ್ಲ. ಸದ್ಯ ನಮ್ಮ ಸೇನೆಯು ಲಡಾಕ್ ಪ್ರಾಂತ್ಯದಲ್ಲಿ ಹಿಡಿತ ಹೊಂದಿದೆ" ಎಂದು ತಿಳಿಸಿದೆ.
ಚೀನಾ ಸೇನೆಯು ಪರ್ವತದ ಅತೀ ಎತ್ತರವಾದ ಪ್ರದೇಶವನ್ನು ಮೈಕ್ರೋವೇವ್ ಓವನ್ ಆಗಿ ಉಪಯೋಗಿಸಿ ವಿವಾದಿತ ಗಡಿ ಪ್ರದೇಶದಲ್ಲಿ ಎರಡು ಮುಖ್ಯವಾದ ಪರ್ವತ ಪ್ರದೇಶಗಳನ್ನು ಮರುವಶಪಡಿಸಿಕೊಂಡಿವೆ ಎಂದು ಚೀನಾದ ಬೀಜಿಂಗ್ ಮೂಲದ ಪ್ರೊಫೆಸರ್ ಓರ್ವರು ಹೇಳಿದ್ದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿತ್ತು.