ಭೋಪಾಲ್, ನ.18 (DaijiworldNews/PY): ರಾಜ್ಯದಲ್ಲಿ ಹಸುಗಳ ರಕ್ಷಣೆಗಾಗಿ 'ಗೋವು ಸಚಿವಾಲಯ' ರಚನೆ ಮಾಡಲು ಮಧ್ಯಪ್ರದೇಶ ಸರ್ಕಾರ ತೀರ್ಮಾನಿಸಿದೆ.
ಈ ಬಗ್ಗೆ ಟ್ಬೀಟ್ ಮಾಡಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, "ರಾಜ್ಯದಲ್ಲಿ ಹಸುಗಳ ರಕ್ಷಣೆಗಾಗಿ ಸಚಿವಾಲಯ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಪಶುಪಾಲನೆ, ಅರಣ್ಯ, ಪಂಚಾಯತ್, ಗ್ರಾಮೀಣಾಭಿವೃದ್ಧಿ, ಕಂದಾಯ, ಗೃಹ ಹಾಗೂ ಕಲ್ಯಾಣ ಇಲಾಖೆಯನ್ನು ಗೋವು ಸಚಿವಾಲಯದಲ್ಲಿ ಸೇರಿಸಲಾಗುವುದು. ಇದರ ಮೊದಲ ಸಭೆಯು ನ.22ರಂದು ನಡೆಯಲಿದೆ" ಎಂದು ತಿಳಿಸಿದ್ದಾರೆ.
ಪಶುಸಂಗೋಪನೆ ಸೇರಿದಂತೆ ಅರಣ್ಯ, ಪಂಚಾಯತ್, ಗ್ರಾಮೀಣಾಭಿವೃದ್ಧಿ, ಕಂದಾಯ, ಗೃಹ ಹಾಗೂ ಕಲ್ಯಾಣ ಇಲಾಖೆಯು ಗೋವು ಸಚಿವಾಲಯ ಭಾಗವಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.