ಜಮ್ಮು, ನ. 18 (DaijiworldNews/MB) : ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾರವರು ಹಿಂದೂಸ್ಥಾನಬಿಟ್ಟು, ಚೀನಾಗೆ ಹೋಗಬೇಕು ಎಂದು ಆರ್ಎಸ್ಎಸ್ ಮುಖಂಡರಾದ ಇಂದ್ರೇಶ್ ಕುಮಾರ್ ಹೇಳಿದ್ದಾರೆ.
ಫಾರೂಕ್ ಅಬ್ದುಲ್ಲಾ
ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಗಿಲ್ಗಿಟ್–ಬಲ್ಟಿಸ್ತಾನ್ ಖಾಲಿ ಮಾಡಲು ಪಾಕಿಸ್ತಾನದ ಮೇಲೆ ಒತ್ತಡ ಹೇರಲು ಆರ್ಎಸ್ಎಸ್ ಮುಖಂಡ ಇಂದ್ರೇಶ್ ಕುಮಾರ್ ಮಂಗಳವಾರ ಅಭಿಯಾನ ಪ್ರಾರಂಭಿಸಿದ್ದಾರೆ. ಮುಸ್ಲಿಂ ರಾಷ್ಟ್ರೀಯ ಮಂಚ್ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಅವರು, ''ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಫಾರೂಕ್ ಅಬ್ದುಲ್ಲಾ ಭಾರತ ಬಿಟ್ಟು ಹೋಗಬೇಕು'' ಎಂದು ಒತ್ತಾಯಿಸಿದ್ದಾರೆ.
ಜಮ್ಮು ಕಾಶ್ಮೀರದ ದ್ವಜ ಮತ್ತೆ ಹಾರಿಸುವವರೆಗೂ ರಾಷ್ಟ್ರ ಧ್ವಜವನ್ನು ಮೇಲೇರಿಸೆವು ಎಂಬ ಮುಫ್ತಿಯವರ ಹೇಳಿಕೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಆರ್ಎಸ್ಎಸ್ ಮುಖಂಡ, ''ಕೇಂದ್ರಾಡಳಿತ ಪ್ರದೇಶದ ಜನರು ಅವರಿಗೆ ಇಷ್ಟವಿರುವ ಕಡೆಗೆ ಹೋಗಲು ಹೇಳುತ್ತಿದ್ದಾರೆ'' ಎಂದರು.
ಹಾಗೆಯೇ ಚೀನಾದ ಬೆಂಬಲ ಪಡೆಯುವ ಬಗ್ಗೆ ಫಾರೂಕ್ ಅಬ್ದುಲ್ಲಾ ಹೇಳಿಕೆಯ ಬಗ್ಗೆ ಮಾತನಾಡಿದ ಅವರು, ''ಫಾರೂಕ್ ಚೀನಾಗೆ ತೆರಳುವಂತೆ ಆಗ್ರಹಿಸಿ ನಿರ್ಣಯ ಕೈಗೊಳ್ಳೋಣ'' ಎಂದು ಹೇಳಿದರು.