ವಿಜಯಪುರ,ನ 17. (DaijiworldNews/HR): ಹಳೆಯ ದ್ವೇಷದ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡ ಮಹಾದೇವ ಸಾಹುಕಾರ ಭೈರಗೊಂಡ ಅವರ ಕಾರಿಗೆ ಟಿಪ್ಪರ್ನಿಂದ ಡಿಕ್ಕಿ ಹೊಡೆದು, ಬಳಿಕ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ವಿಜಯಪುರ ನಗರದ ಬಂಬಳ ಅಗಸಿ ನಿವಾಸಿ ಮಹೇಶ ಅರ್ಜುನ ಸಾಳುಂಕೆ(26) ಹಾಗೂ ವಜ್ರಹನುಮಾನ ಪ್ರದೇಶದ ನಿವಾಸಿ ಬಾಬು ನಿಂಗನಗೌಡ ಬಿರಾದಾರ(23) ಎಂದು ಗುರುತಿಸಲಾಗಿದೆ.
ಇನ್ನುಬಂಧಿತರಿಂದ ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನ್, ಒಂದು ಆಟೋ ಹಾಗೂ ಒಂದು ತಲವಾರ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್ಪಿ ಅನುಪಮ ಅಗರವಾಲ್ ತಿಳಿಸಿದ್ದಾರೆ.
ನವೆಂಬರ್ 2 ರಂದು ವಿಜಯಪುರ ನಗರದ ಹೊರ ವಲಯದಲ್ಲಿ ಮಹಾದೇವ ಭೈರಗೊಂಡ ಹಾಗೂ ಸಂಗಡಿಗರ ಮೇಲೆ ಗುಂಡಿನ ದಾಳಿ ನಡೆದಿದ್ದು, ಅದರಲ್ಲಿ ಭೈರಗೊಂಡನ ಮ್ಯಾನೇಜರ್ ಬಾಬುರಾಮ್ ಮಾರುತಿ ಕಂಚನಾಳ (64) ಸ್ಥಳದಲ್ಲೇ ಮೃತಪಟ್ಟಿದ್ದನು.