ಬೆಂಗಳೂರು,ನ 17. (DaijiworldNews/HR): ಕಾಂಗ್ರೆಸ್ ನಾಯಕರಿಗೆ ದಲಿತರ ಮೇಲೆ ಬರೋದು ಮೊಸಳೆ ಕಣ್ಣೀರು ಎನ್ನುವುದು ಸಾಬೀತಾಗಿದೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಸಂಪತ್ ರಾಜ್ ಪರವೋ ಅಥವಾ ಅಖಂಡ ಶ್ರೀನಿವಾಸ್ ಮೂರ್ತಿ ಪರವೋ ಎಂದು ಹೇಳಬೇಕು. ದಲಿತ ಶಾಸಕನ ಮನೆ ಮೇಲೆ ದಾಳಿ ನಡೆದಿತ್ತು, ಆದರೆ ಘಟನೆಗೆ ಕಾರಣರಾದವರನ್ನು ಬಂಧಿಸಿ ಯಾವುದೇ ಕಾಂಗ್ರೆಸ್ ನ ನಾಯಕರು ಪ್ರತಿಭಟನೆ ಮಾಡಿಲ್ಲ. ದಲಿತರ ಮೇಲೆ ಕಾಂಗ್ರೆಸ್ ಗೆ ಬರೋದು ಮೊಸಳೆ ಕಣ್ಣೀರು ಎನ್ನೋದು ಸಾಬೀತಾಗಿದೆ ಎಂದರು.
ಇನ್ನು ಅಖಂಡ ಶ್ರೀನಿವಾಸ್ ಮೂರ್ತಿ ಅವರು ಬಹಿರಂಗವಾಗಿ ಕಾಂಗ್ರೆಸ್ ನಾಯಕರು ನನಗೆ ಬೆಂಬಲ ನೀಡಿ, ನ್ಯಾಯ ಕೊಡಿಸಿ ಎಂದು ಹೇಳಿಕೆ ನೀಡಿದ್ದರು, ಆದರೂ ಕೂಡ ಕಾಂಗ್ರೆಸ್ ಸಹಾಯ ಮಾಡಲಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.