ಪ್ರಯಾಗ್ರಾಜ್ , ನ 17. (DaijiworldNews/HR): ಬಿಜೆಪಿ ಸಂಸದೆ ರೀತಾ ಬಹುಗುಣ ಜೋಶಿ ಅವರ ಮೊಮ್ಮಗಳು ಪಟಾಕಿ ಸಿಡಿಸಲು ಹೋಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿಂದು ಇಂದು ಸಾವನ್ನಪ್ಪಿದ್ದಾಳೆ.
ಸಂಸದೆಯ ಪುತ್ರ ಮಾಯಾಂಕ್ ಜೋಷಿಯವರ ಪುತ್ರಿ 8 ವರ್ಷದ ಮಗು ಪಟಾಕಿ ಹೊಡೆಯುವ ವೇಳೆ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಏರ್ ಆಯಂಬುಲೆನ್ಸ್ ಮೂಲಕ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾಳೆ.
ಇನ್ನು ಬಾಲಕಿಯ ಸಾವು ಹಿನ್ನೆಲೆಯಲ್ಲಿ ಸಂಸದೆ ರೀತಾ ಬಹುಗುಣ ಅವರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.