ನವದೆಹಲಿ,ನ 17. (DaijiworldNews/HR): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಒಬ್ಬ ರಾಜಕೀಯವಾಗಿ ತಿರಸ್ಕೃತ, ಬಳಲಿದ ನಾಯಕನಾಗಿದ್ದು, ಬಿಹಾರವು ಇನ್ನಷ್ಟು ವರ್ಷಗಳವರೆಗೆ ನೀರಸ ಆಡಳಿತ ಅನುಭವಿಸಬೇಕಾಗಿದೆ ಎಂದು ಚುನಾವಣಾ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಬಿಹಾರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಿತೀಶ್ ಕುಮಾರ್ ಅವರಿಗೆ ಅಭಿನಂದನೆಗಳು. ರಾಜಕೀಯವಾಗಿ ತಿರಸ್ಕೃತ, ಬಳಲಿದ ನಾಯಕ ಮುಖ್ಯಮಂತ್ರಿಯಾಗಿರುವುದರಿಂದ ಬಿಹಾರವು ಇನ್ನಷ್ಟು ವರ್ಷಗಳ ಕಾಲ ನೀರಸ ಆಡಳಿತ ಅನುಭವಿಸಬೇಕಾಗಿದೆ" ಎಂದು ಹೇಳಿದ್ದಾರೆ.
ಇನ್ನು ನಿತೀಶ್ ಕುಮಾರ್ ಅವರು ಬಿಹಾರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಕಿಶೋರ್ ಟ್ವೀಟ್ ಮಾಡಿದ್ದಾರೆ.