ಫತೇಪುರ, ನ 17. (DaijiworldNews/HR): ಇಬ್ಬರು ಅಪ್ರಾಪ್ತ ದಲಿತ ಸಹೋದರಿಯರನ್ನು ಕೊಂದು ದೇಹಗಳನ್ನು ಕೊಳದಲ್ಲಿ ಎಸೆದ ಘಟನೆ ಉತ್ತರ ಪ್ರದೇಶ ಫತೇಪುರ ಜಿಲ್ಲೆಯ ಅಸೋತರ್ ಎಂಬಲ್ಲಿ ನಡೆದಿದೆ.
ಹತ್ಯೆಯಾದ ಬಾಲಕಿಯರನ್ನು ದಿಲೀಪ್ ಧೋಬಿ ಎಂಬುವರ ಪುತ್ರಿಯರಾದ ಸುಮಿ (12) ಮತ್ತು ಕಿರಣ್ (8) ಎಂದು ಗುರುತಿಸಲಾಗಿದೆ.
ಇನ್ನು ಇಬ್ಬರು ಬಾಲಕಿಯರ ಕಣ್ಣುಗಳ ಬಳಿ ಗಾಯದ ಗುರುತುಗಳು ಕಂಡು ಬಂದಿದ್ದು, ಸೋಮವಾರ ಸಂಜೆ ಹೊತ್ತಿಗೆ ಅವರ ದೇಹಗಳನ್ನು ಕೊಳದಿಂದ ಹೊರತೆಗೆಯಲಾಯಿತು ಎಂದು ಎಎಸ್ಪಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.
ಮಕ್ಕಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಬಳಿಕ ದುಷ್ಕರ್ಮಿಗಳು ಕೊಂದಿದ್ದಾರೆ ಎಂದು ಬಾಲಕಿಯರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.