ನವದೆಹಲಿ,ನ 17. (DaijiworldNews/HR): ದೆಹಲಿಯಲ್ಲಿ ಇಬ್ಬರು ಜೈಶ್ ಎ ಮೊಹಮ್ಮದ್ ಉಗ್ರರು ಭಯೋತ್ಪಾದಕ ದಾಳಿ ನಡೆಸಲು ಮುಂದಾಗಿದ್ದು, ಇದೀಗ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಬಂಧಿತ ಉಗ್ರರನ್ನು ಅಬ್ದುಲ್ ಲತೀಫ್ (22 )ಮತ್ತು ಮೊಹಮ್ಮದ್ ಅಶ್ರಫ್ ಖತಾನಾ (20 ವ) ಎಂದು ಗುರುತಿಸಲಾಗಿದೆ.
ದಿಲ್ಲಿಯ ಮಿಲೇನಿಯಮ್ ಪಾರ್ಕ್ ಹತ್ತಿರ ಸೋಮವಾರ ರಾತ್ರಿ 10.15ರ ಸುಮಾರಿಗೆ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿದ್ದು, ಅವರಲಿದ್ದ ಎರಡು ಅರೆ- ಸ್ವಯಂವಾಲಿತ ಪಿಸ್ತೂಲುಗಳು ಮತ್ತು ಹತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಗ್ರರು ಜಮ್ಮು ಕಾಶ್ಮೀರದ ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.