ನವದೆಹಲಿ, ನ. 17 (DaijiworldNews/MB) : ಲಾಕ್ಡೌನ್ ಸಮಯದಲ್ಲಿ ಹಲವು ಜನರಿಗೆ ಸಹಾಯಹಸ್ತ ಚಾಚುವ ಮೂಲಕ ಜನಮೆಚ್ಚುಗೆಗೆ ಪಾತ್ರರಾಗಿರುವ ಬಾಲಿವುಡ್ ನಟ ಸೋನು ಸೂದ್ ಅವರನ್ನು ಪಂಜಾಬ್ ರಾಜ್ಯ ಚುನಾವಣಾ ರಾಯಭಾರಿಯಾಗಿ ನೇಮಕ ಮಾಡಿ ಭಾರತೀಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಹಾಗೆಯೇ ಈ ಪಂಜಾಬ್ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಎಸ್. ಕರುಣಾ ರಾಜು ಅವರು ಭಾರತೀಯ ಚುನಾವಣಾ ಆಯೋಗದ ಈ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ ಎಂದು ವರದಿಯಾಗಿದೆ.
ಲಾಕ್ಡೌನ್ ಸಂದರ್ಭದಲ್ಲಿ ಸಾವಿರಾರು ಕಾರ್ಮಿಕರು ತಮ್ಮ ಊರುಗಳಿಗೆ ತಲುಪಲು ಸಹಾಯ ಮಾಡಿರುವ ಬಾಲಿವುಡ್ ನಟ ಸೋನುಸೂದ್ ಅವರು ಕೊರೊನಾ ಲಾಕ್ಡೌನ್ ಅನುಭವದ ಕುರಿತು "ಐ ಆಮ್ ನಾಟ್ ಎ ಮೈಸೆ" ಎಂಬ ಪುಸ್ತಕ ಬರೆದಿದ್ದು, ಮುಂದಿನ ತಿಂಗಳು ಪ್ರಕಟವಾಗಲಿದೆ.