ರಾಜಸ್ಥಾನ : ನ. 16 (DaijiworldNews/HR): ರಾಜಸ್ಥಾನದ ಕ್ಯಾಬಿನೆಟ್ ಸಚಿವ ಭನ್ವರ್ ಲಾಲ್ ಮೇಘವಾಲ್ ((72)) ಅವರು ದೀರ್ಘಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ನಿಧನರಾಗಿದ್ದಾರೆ.
ಹಿನ್ನೆಲೆ ಭನ್ವರ್ ಲಾಲ್ ಅವರು ಮೇಘವಾಲ್ಹರಿಯಾಣದ ಗುರುಗ್ರಾಮ್ನ ಮೇದಂತ ಆಸ್ಪತ್ರೆಯಲ್ಲಿ ಮಿದುಳಿನ ಹೊಡೆತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ನಿಧನರಾಗಿದ್ದಾರೆ.
ಇನ್ನುಭನ್ವರ್ ಲಾಲ್ ಮೇಘವಾಲ್ ಅವರ ನಿಧನದ ಹಿನ್ನಲೆಯಲ್ಲಿ ರಾಜಸ್ಥಾನ್ ಸರ್ಕಾರ ಮಂಗಳವಾರ ರಾಜ್ಯ ಶೋಕಾಚರಣೆ ಘೋಷಿಸಿದೆ.
ಭನ್ವರ್ ಲಾಲ್ ಮೇಘವಾಲ್ ಅವರು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಕಾಂಗ್ರೆಸ್ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸಚಿವರಾಗಿದ್ದರು. ಜೊತೆಗೆ ರಾಜಸ್ಥಾನದ ಶಿಕ್ಷಣ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.