ಬೆಂಗಳೂರು,ನ. 16 (DaijiworldNews/HR): ಸಂಸದ ಪ್ರತಾಪ್ಸಿಂಹ ಅವರು ಮಾತಾನಾಡುವಾಗ ಅರಿತುಕೊಂಡು ಮಾತನಾಡಬೇಕು, ಪೇಟೆ ರೌಡಿಯ ತರಹ ಮಾತನಾಡಬಾರದು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ಅವರು ಪ್ರತಾಪ್ಸಿಂಹಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು , ಪ್ರತಾಪ್ಸಿಂಹ ಎರಡು ಬಾರಿ ಸಂಸದರಾಗಿದ್ದಾರೆ. ಅವರು ಯಾವುದೇ ವಿಷಯವನ್ನು ಮಾತಾನಾಡುವಾಗ ಅದನ್ನು ಅರಿತುಕೊಂಡು ಮಾತಾನಾಡಬೇಕು. ಪೇಟೆ ರೌಡಿಯ ತರಹ ಮಾತನಾಡಬಾರದು. ಮೈಸೂರು ಕ್ಷೇತ್ರದಲ್ಲಿ ಏನೆಲ್ಲಾ ಅಭಿವೃದ್ಧಿ ಆಗಿದೆ ಎಂದು ನನಗೂ ತಿಳಿಸಿದೆ. ಕೊಡಗು ಭಾಗಗಳಲ್ಲಿ ರಸ್ತೆಗಳು ಕೊಚ್ಚಿ ಹೋಗಿರುವ ದೂರು ನಮಗೂ ಬಂದಿದೆ. ಅಂಬರೀಶ್ ಇದ್ದಾಗ ಯಾರಿಗೂ ಧೈರ್ಯ ಇರಲಿಲ್ಲ, ಇಂತಹ ಮಾತುಗಳನ್ನು ಯಾರು ಆಡುತ್ತಿರಲಿಲ್ಲ. ಆದರೆ ಈಗ ಅವರಿಲ್ಲ ಎಂದು ಈ ರೀತಿಯಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಪ್ರತಾಪ್ ನಮ್ಮ ಕ್ಷೇತ್ರದ ಬಗ್ಗೆ ಮಾತನಾಡುವುದು ಸರಿಯಲ್ಲ. ಒಬ್ಬ ಸಂಸದರಾಗಿ, ಇನ್ನೊಬ್ಬ ಸಂಸದರ ಬಗ್ಗೆ ಮಾತನಾಡಲು ಹಕ್ಕಿಲ್ಲ. ಸಂಸದರು ಸಂಸದರ ಭಾಷೆ ಬಳಸಿ ಮಾತನ್ನಾಡ್ಡಿದರೆ ಒಳ್ಳೆಯದು, ಪೇಟೆ ರೌಡಿ ರೀತಿಯಲ್ಲಿ ಮಾತನ್ನಾಡಿದ್ರೆ ನಾನು ಉತ್ತರ ನೀಡುವುದಿಲ್ಲ ಎಂದರು.
ಪ್ರತಾಪ್ ಸಿಂಹ ಅವರು ಸುಮಲತಾ ಯಾವುದೇ ಕೆಲಸ ಮಾಡುವುದಿಲ್ಲ. ಮಂಡ್ಯಕ್ಕೆ ಸಂಬಂಧಿಸಿದ ಯಾವುದೇ ಕೆಲಸವಿದ್ದರೆ ಹೇಳಿ ಎಂದು ಕರೆಯಲ್ಲಿ ಮಾತನಾಡುತ್ತಾ ಹೇಳಿದ್ದು, ಇದೀಗ ಅದಕ್ಕೆ ಸುಮಲತಾ ತಿರುಗೇಟು ನೀಡಿದ್ದಾರೆ.