ನವದೆಹಲಿ,ನ. 16 (DaijiworldNews/HR): ಕೊರೊನಾ ತಡೆಗಟ್ಟಲು ಲಸಿಕೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಭಾರತ, ಅಂತಾರಾಷ್ಟ್ರೀಯ ಮತ್ತು ಬಹುಪಕ್ಷೀಯ ಸಹಭಾಗಿತ್ವದ ಹೃದಯಭಾಗವಾಗಿದೆ ಎಂದು ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಗೆ ಬದ್ಧತೆ ತೋರಿಸಿದ್ದು, ಲಸಿಕೆಗಳನ್ನ ಕಡಿಮೆ ದರದಲ್ಲಿ ಎಲ್ಲರಿಗೂ ಕೈಗೆಟುಕುವಂತಾಗಲು ಭಾರತ ಸಹಾಯ ಮಾಡಲಿದೆ. ಭಾರತ ಈ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಲು ಇಡಿ ವಿಶ್ವವೇ ನಿರೀಕ್ಷಿಸುತ್ತಿದೆ ಎಂದರು.
ಇನ್ನು ಬಹು ಬೇಡಿಕೆಯ ಔಷಧಗಳಾದ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಪ್ಯಾರೆಸಿಟಮಾಲ್ ಉತ್ಪಾದನೆಯನ್ನ ಭಾರತ ಹೆಚ್ಚಿಸಿ, 150 ದೇಶಗಳಿಗೆ ಅರ್ಧಕ್ಕಿಂತ ಕಡಿಮೆ ದರದಲ್ಲಿ ಪೂರೈಸಿದೆ. ಇದೀಗ ತ್ವರಿತ ಪರೀಕ್ಷೆ ಮತ್ತು ವಿಶ್ವಾಸಾರ್ಹ ಲಸಿಕೆಗಳೆಡೆಗೆ ಗಮನ ಬದಲಾಗಿದೆ. ಈ ನಿಟ್ಟಿನಲ್ಲಿ ಭಾರತ, ಅಂತಾರಾಷ್ಟ್ರೀಯ ಮತ್ತು ಬಹುಪಕ್ಷೀಯ ಸಹಭಾಗಿತ್ವದ ಹೃದಯ ಭಾಗದಲ್ಲಿದೆ ಎಂದು ಸಚಿವರು ಹೇಳಿದ್ದಾರೆ.