ನವದೆಹಲಿ,ನ. 16 (DaijiworldNews/HR): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರೀಯ ಪತ್ರಿಕಾ ದಿನದ ಅಂಗವಾಗಿ ಶುಭಾಶಯ ಕೋರಿದ್ದು, ಮೋದಿ ಸರ್ಕಾರವು ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಗೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾದಿರುವ ಅವರು, 'ರಾಷ್ಟ್ರೀಯ ಪತ್ರಿಕಾ ದಿನದ ಶುಭಾಶಯಗಳು. ನಮ್ಮ ಮಹಾನ್ ದೇಶದ ಅಡಿಪಾಯವನ್ನು ಬಲಪಡಿಸಲು ಮಾಧ್ಯಮಗಳು ದಣಿವರಿಯದೆ ಶ್ರಮಿಸುತ್ತಿವೆ. ಮೋದಿ ಸರ್ಕಾರವು ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಗೆ ಬದ್ಧವಾಗಿದೆ ಮತ್ತು ಅದಕ್ಕೆ ತಡೆಯೊಡ್ಡುವವರನ್ನು ಪ್ರಬಲವಾಗಿ ವಿರೋಧಿಸುತ್ತದೆ. ಕೊರೊನಾ ಸನ್ನಿವೇಶದಲ್ಲಿ ಮಾಧ್ಯಮದ ಪಾತ್ರವನ್ನು ಶ್ಲಾಘಿಸುತ್ತೇನೆ' ಎಂದು ಹೇಳಿದ್ದಾರೆ.
ಇನ್ನು 1966ರ ನವೆಂಬರ್ 16 ರಂದು ಭಾರತೀಯ ಪ್ರತಿಕಾ ಮಂಡಳಿ ಸ್ಥಾಪನೆಯಾದ ಸ್ಮರಣಾರ್ಥವಾಗಿ ಈ ದಿನವನ್ನು ರಾಷ್ಟ್ರೀಯ ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತದೆ.