ಪಟ್ನಾ, ನ. 16 (DaijiworldNews/HR): ಬಿಹಾರದ 37ನೇ ಮುಖ್ಯಮಂತ್ರಿ ಆಗಿ ಸತತ ನಾಲ್ಕನೇ ಬಾರಿಗೆ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಇಂದು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.
ತಾರ್ ಕಿಶೋರ್ ಮತ್ತು ರೇಣು ದೇವಿ ಇಬ್ಬರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬಿಹಾರದಲ್ಲಿ ಅಕ್ಟೋಬರ್ 28ರಿಂದ ಮೂರು ಹಂತಗಳಲ್ಲಿ ಚುನಾವಣೆ ನಡೆದಿದ್ದು, ಬಿಜೆಪಿ-ಜೆಡಿಯು ನೇತೃತ್ವದ ಎನ್ಡಿಎ ಒಕ್ಕೂಟ, ಆರ್ಜೆಡಿ-ಕಾಂಗ್ರೆಸ್-ಎಡಪಕ್ಷಗಳ ನೇತೃತ್ವದ ಮಹಾ ಮೈತ್ರಿಕೂಟದ ಎದುರು ಜಯಶಾಲಿಯಾಗಿತ್ತು. ಆದರೆ ಜೆಡಿಯು ಕಡಿಮೆ ಸೀಟುಗಳನ್ನು ಗೆದ್ದು ಮೂರನೇ ಸ್ಥಾನಕ್ಕೆ ಕುಸಿದಿದ್ದರು ಕೂಡ ಜೆಡಿಯು ನಾಯಕರಿಗೇ ಮುಖ್ಯಮಂತ್ರಿ ಪಟ್ಟ ಸಿಕ್ಕಿದೆ.
ಇನ್ನುಚುನಾವಣೆಗೂ ಮುಂಚೆಯೇ ಬಿಜೆಪಿ, ನಿತೀಶ್ ಕುಮಾರ್ ಅವರೇ ಎನ್ಡಿಎ ಅಭ್ಯರ್ಥಿ ಎಂದು ಹೇಳಿದ್ದು, ಭಾನುವಾರ ನಡೆದ ಎನ್ಡಿಎ ಸಭೆಯಲ್ಲಿ ನಿತೀಶ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿತ್ತು.