ರಾಯಪುರ್, ನ. 16 (DaijiworldNews/MB) : ಛತ್ತೀಸ್ ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಚಾವಟಿಯಿಂದ ಏಟು ಹೊಡೆಸಿಕೊಂಡ ಘಟನೆ ನಡೆದಿದ್ದು ಹಲವರು ಇದನ್ನು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಈ ವಿಡಿಯೋವನ್ನು ಸ್ವತಃ ಮುಖ್ಯಮಂತ್ರಿಯವರೇ ಟ್ವೀಟ್ ಮಾಡಿದ್ದಾರೆ.
ಅಷ್ಟಕ್ಕೂ ಅವರು ಚಾವಟಿಯಿಂದ ಏಟು ಹೊಡೆಸಿಕೊಳ್ಳುವುದಕ್ಕೆ ಕಾರಣವಿದೆ. ಅದು ಇಲ್ಲಿನ ಸಂಪ್ರದಾಯ.
ಭೂಪೇಶ್ ಬಘೇಲ್ ಅವರು ಗೋವರ್ಧನ್ ಪೂಜಾದಲ್ಲಿ ಭಾಗಿಯಾಗಿದ್ದು ಸಂಪ್ರದಾಯಿಕವಾಗಿ ಇರುವ ಎಲ್ಲಾ ರೀತಿ ರಿವಾಜುಗಳನ್ನು ಪಾಲಿಸಿದ್ದಾರೆ. ಆ ಸಂಪ್ರದಾಯದಂತೆ ಚಾವಟಿಯಿಂದ ಏಟು ಹೊಡೆಸಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಎಂದಿನಂತೆ ಈ ಬಾರಿಯೂ ದುರ್ಗ ಜಿಲ್ಲೆಯ ಕುಮಹರಿ ಜಜಾಂಗಿರಿ ಗ್ರಾಮದಲ್ಲಿ ಚಾವಟಿಯಿಂದ ಏಟು ಹೊಡೆಸಿಕೊಳ್ಳುವ ಸಂಪ್ರದಾಯ ಪಾಲಿಸಿದೆ. ಈ ಸುಂದರ ಸಂಪ್ರದಾಯವನ್ನು ಎಲ್ಲರ ಸಂತೋಷಕ್ಕಾಗಿ ಆಚರಿಸಲಾಗುತ್ತದೆ'' ಎಂದು ಹೇಳಿದ್ದಾರೆ.