ಬೆಂಗಳೂರು, ನ. 16 (DaijiworldNews/HR): ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ ಪೆಡ್ಲರ್ಗಳನ್ನು ಇಂದು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ನೈಜೀರಿಯಾದ ಮಾರ್ಕ್ ಹಾಗೂ ಹೆನ್ರಿ ಎಂದು ಗುರುತಿಸಲಾಗಿದೆ.
ಇನ್ನು ಬಂಧಿತರಿಂದ 6 ಮೊಬೈಲ್ ಪೋನ್ಗಳು ಹಾಗೂ ಪಾಸ್ಪೋರ್ಟ್ನ್ನು ಜಪ್ತಿ ಮಾಡಲಾಗಿದೆ.
ಇತ್ತಿಚೆಗೆ ನೈಜೀರಿಯಾದ ಪೆಡ್ಲರ್ ಸನ್ನಿ ಎಂಬಾತನನ್ನು ಬಂಧಿಸಿ, ಆತನಿಂದ ಕೊಕೇನ್ ಜಪ್ತಿ ಮಾಡಲಾಗಿತ್ತು. ಆತ ನೀಡಿದ್ದ ದೂರು ಆಧರಿಸಿ ಇದೀಗ ಮಾರ್ಕ್ ಹಾಗೂ ಹೆನ್ರಿಯನ್ನು ಸೆರೆ ಹಿಡಿಯಲಾಗಿದೆ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದ್ದಾರೆ.