ಮುಂಬೈ, ನ. 16 (DaijiworldNews/MB) : ''ಭಾರತದ ಭದ್ರತೆ, ಜಾತ್ಯತೀತತೆ ಬಗ್ಗೆ ಮುಸ್ಲಿಮರು ಸಮಾನವಾಗಿ ಕಾಳಜಿ ವಹಿಸುತ್ತಾರೆ'' ಎಂದು ಖ್ಯಾತ ಬೌದ್ಧಿಕ ಮತ್ತು ಇಸ್ಲಾಮಿಕ್ ವಿದ್ವಾಂಸ ಮೌಲಾನಾ ಮೊಹಮ್ಮದ್ ಬುರ್ಹಾನುದ್ದೀನ್ ಖಾಸ್ಮಿ ಹೇಳಿದರು.
ಮುಂಬೈನ ಮಾರ್ಕಾಜುಲ್ ಮಾರಿಫ್ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ (ಎಂಎಂಇಆರ್ಸಿ) ನಿರ್ದೇಶಕರು ಆಗಿರುವ ಖಾಸ್ಮಿ ಅವರು, "ತಮ್ಮನ್ನು 'ವೀರರು' ಎಂದು ಬಿಂಬಿಸಿಕೊಳ್ಳುವುದು ಹಾಗೂ ಅವರಿಗಿಂತ ದುರ್ಬಲರಂತೆ ಇರುವವರನ್ನು ಯಾವಾಗಲೂ 'ಖಳನಾಯಕರು' ಎಂದು ಹಣೆಪಟ್ಟಿ ಕಟ್ಟುವುದು ಮಾನವ ನಾಗರಿಕತೆಯ ಉದಯದಿಂದಲೂ ಜಾಗತಿಕ ರೂಢಿಯಾಗಿದೆ. ಹಳೆಯ ವಿಷವನ್ನೇ ಈಗ ಹೊಸ ಪರಿಭಾಷೆಯ ಹೊದಿಕೆ ಹೊದಿಸಿ ಮಾರಾಟ ಮಾಡಲಾಗುತ್ತಿದೆ" ಎಂದು ಹೇಳಿದರು.
''ಆದರೆ ಪ್ರಸ್ತುತ ಜಗತ್ತು ಸಂವಹನ ಆರಂಭಿಸಿರುವ ಯುಗಕ್ಕೆ ಸಾಕ್ಷಿಯಾಗಿದೆ. ಅದಕ್ಕಾಗಿ ಸಾಮಾಜಿಕ ಮಾಧ್ಯಮಗಳಿಗೆ ಧನ್ಯವಾದಗಳು ಎಂದು ಹೇಳಿದ ಅವರು, ಮಾಹಿತಿ ಪ್ರಸಾರ ವಿಚಾರದಲ್ಲಿ ಯಾರೊಬ್ಬರ ಕೈಯಲ್ಲಿ ಇರುವ ಏಕಸ್ವಾಮ್ಯತ್ವವನ್ನು ಮುರಿಯಬೇಕಾಗಿದೆ'' ಎಂದರು.
"ಜನರಿಗೆ ಸರಿಯಾದ ಸಂದೇಶಗಳನ್ನು ನೀಡಲು ಹಾಗೂ ಮುಸ್ಲಿಮರ ವಿರುದ್ಧದ 'ದ್ವೇಷ-ಅಭಿಯಾನ'ವನ್ನು ದೂರಮಾಡಲು ಜಗತ್ತಿನಲ್ಲಿ ಲಕ್ಷಾಂತರ ಒಳ್ಳೆಯ ಆತ್ಮಗಳು ಬಯಸುತ್ತದೆ. ಈ ಸಕಾರಾತ್ಮಕ ಬೆಳವಣಿಗೆಯು ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶವನ್ನು ಒದಗಿಸುತ್ತದೆ" ಎಂದು ಅಭಿಪ್ರಾಯ ಪಟ್ಟರು.
''ಭಾರತೀಯ ಮುಸ್ಲಿಮರ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಧರ್ಮದ ಬಗ್ಗೆ ಋಣಾತ್ಮಕ ಪ್ರಚಾರದಿಂದಾಗಿ, ನಿರಾಶೆ, ಅಸಹಾಯಕತೆ, ಅಸಹನೆ ಮತ್ತು ನಿರಾಶೆಯ ಛಾಯೆಯು ನೆಲಮಟ್ಟದಲ್ಲಿ ಹೆಚ್ಚಾಗಿ ಬದಲಾಗದೆ ಉಳಿದಿದೆ'' ಎಂದು ಹೇಳಿದರು.
"ಇಲ್ಲಿನ ಮುಸ್ಲಿಮರು ದೇಶದ ಭದ್ರತೆ ಮತ್ತು ಪ್ರಜಾಪ್ರಭುತ್ವ, ಜಾತ್ಯತೀತತೆಯ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದಾರೆಂಬುದನ್ನು ತಿಳಿದುಕೊಳ್ಳುವಲ್ಲಿ ಅನೇಕರು ವಿಫಲರಾಗಿದ್ದಾರೆ" ಎಂದರು.
''ಉಗ್ರವಾದದಿಂದಾಗಿ ಭಾರತದಲ್ಲಿ ಅಲ್ಪಸಂಖ್ಯಾತರು ಮಾತ್ರವಲ್ಲ, ಪ್ರಜಾಪ್ರಭುತ್ವ, ಬಹುಸಂಖ್ಯಾತರು ಹಾಗೂ ಭಾರತದ ಕಲ್ಪನೆಯು ಕೂಡಾ ಅಪಾಯದಲ್ಲಿದೆ'' ಎಂದು ಅವರು ಆತಂಕ ವ್ಯಕ್ತಪಡಿಸಿದರು.