ತಿರುವನಂತಪುರ, ನ. 16 (DaijiworldNews/HR): ಪೂಜಾಪ್ಪುರ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳು ಇದೀಗ ಹವಾಯಿ ಚಪ್ಪಲಿಗಳನ್ನು ತಯಾರಿಸಿದ್ದು, ಅದು ಸದ್ಯದಲ್ಲೇ ಕೇರಳ ಮಾರುಕಟ್ಟೆಗೆ ಬರಲಿದ್ದು, ಆನ್ಲೈನ್ ಮೂಲಕವೂ ಸಿಗಲಿದೆ.
ಜೈಲಿನಲ್ಲಿದ್ದ ಕೈದಿಗಳು ಈಗಾಗಲೇ ಆಹಾರ ಖಾದ್ಯ, ಆರ್ಗಾನಿಕ್ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಬಿಟ್ಟು ಸೈ ಎಣಿಸಿಕೊಂಡಿದ್ದು, ಇದೀಗ ಚಪ್ಪಲಿ ತಯಾರಿಕೆ ಮೂಲಕ ಮತ್ತೊಂದು ಪ್ರಯತ್ನ ಮಾಡಿದ್ದಾರೆ.
ಇನ್ನು ಈ ಕೈದಿಗಳು ತಯಾರಿಸಿದ ಚಪ್ಪಲಿಗಳು ಮಾರುಕಟ್ಟೆ ಫ್ರೀಡಂ ವಾಕ್ ಎಂಬ ಹೆಸರಿನಲ್ಲಿ ಬರಲಿಸ್ಸು, ಜೋಡಿ ಚಪ್ಪಲಿಗೆ 80 ರೂ. ನಿಗದಿಪಡಿಸಲಾಗಿದೆ ಎಂದು ಜೈಲಿನ ಸೂಪರಿಂಟೆಂಡೆಂಟ್ ನಿರ್ಮಲಾನಂದನ್ ನಾಯರ್ ತಿಳಿಸಿದ್ದಾರೆ.