ಬೆಂಗಳೂರು, ನ. 16 (DaijiworldNews/MB) : ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್ಎಂಸಿ) ಚುನಾವಣೆಗೆ ಬಿಜೆಪಿ ಸಹ ಪ್ರಭಾರಿಗಳನ್ನಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹಾಗೂ ಬೊಮ್ಮನಹಳ್ಳಿ ಶಾಸಕ ಎಂ. ಸತೀಶ್ ರೆಡ್ಡಿ ಅವರನ್ನು ನೇಮಿಸಲಾಗಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಜಿಎಚ್ಎಂಸಿ ಚುನಾವಣಾ ಪ್ರಭಾರಿಯನ್ನಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಅವರನ್ನು ಹಾಗೂ ಸುಧಾಕರ್, ಸತೀಶ್ ರೆಡ್ಡಿ, ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಆಶೀಶ್ ಶೆಲರ್, ಗುಜರಾತ್ನ ಪ್ರದೀಪ್ ಸಿಂಗ್ ವಘೇಲಾ ಅವರನ್ನು ಸಹ ಪ್ರಭಾರಿಗಳನ್ನಾಗಿ ನೇಮಿಸಿದ್ದಾರೆ.
2019ರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ 15 ಮಂದಿಯ ಪೈಕಿ ಸುಧಾಕರ್ ಕೂಡಾ ಒಬ್ಬರಾಗಿದ್ದು ಅವರರು ಬಿಜೆಪಿ ಸೇರಿ ಒಂದು ವರ್ಷ ಆಗುವುದರೊಳಗೆ ಪಕ್ಷದ ಸಂಘಟನಾ ವಿಭಾಗದಲ್ಲೂ ಜವಾಬ್ದಾರಿ ನೀಡಲಾಗಿದೆ.
ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಬಳಿಕ ಅವರಿಗೆ ಬಿಜೆಪಿಯಲ್ಲಿ ಉತ್ತಮ ಸ್ಥಾನವನ್ನು ನೀಡಲಾಗಿದ್ದು 2020ರ ಫೆಬ್ರುವರಿಯಲ್ಲಿ ಅವರು ವೈದ್ಯಕೀಯ ಶಿಕ್ಷಣ ಸಚಿವರಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಯಾದರು. ಅಷ್ಟೇ ಅಲ್ಲದೇ ಇತ್ತೀಚೆಗೆ ಆರೋಗ್ಯ ಖಾತೆಯನ್ನೂ ಕೂಡಾ ಅವರಿಗೆ ನೀಡಲಾಗಿದೆ.