ಕೋಲ್ಕತಾ, ನ.15 (DaijiworldNews/HR): ಪಶ್ಚಿಮ ಬಂಗಾಳದ ಸ್ಥಿತಿ ಕಾಶ್ಮೀರಕ್ಕಿಂತಲೂ ಕೆಟ್ಟದ್ದಾಗಿದ್ದು, ಭಯೋತ್ಪಾದಕರ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.
ಈ ಕುರಿತು ಸುದ್ದಿಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು, 'ಇತ್ತೀಚಿನ ದಿನಗಳಲ್ಲಿ ಅಲ್-ಖೈದಾ ಸಂಘಟನೆಯ ಉಗ್ರರನ್ನು ಪಶ್ಚಿಮ ಬಂಗಾಳದ ಕೂಚ್ಬೆಹರ್ನಲ್ಲಿ ಗುರುತಿಸಲಾಗಿದ್ದು, ಅವರ ಜಾಲ ಪಶ್ಚಿಮ ಬಂಗಾಳದಲ್ಲಿ ಬೆಳೆಯುತ್ತಿದೆ. ರಾಜ್ಯವು ಭಯೋತ್ಪಾದಕರ ಕೇಂದ್ರವಾಗಿ ಮಾರ್ಪಟ್ಟಿದೆ ಎಂದರು.
ಇನ್ನು ಪಶ್ಚಿಮ ಬಂಗಾಳದ ಸ್ಥಿತಿಯು ಕಾಶ್ಮೀರಕ್ಕಿಂತ ಕೆಟ್ಟದ್ದಾಗಿದ್ದು,ಭಯೋತ್ಪಾದಕರ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಹೇಳಿದ್ದಾರೆ.