ಪಟ್ನಾ, ನ.15 (DaijiworldNews/HR): ಬಿಹಾರ ವಿಧನಸಭಾ ಚುನಾವಣೆಯಲ್ಲಿ ಕೇವಲ 40 ಸ್ಥಾನಗಳನ್ನು ಪಡೆದಿರುವವರು ಮುಖ್ಯಮಂತ್ರಿ ಆಗುವುದಕ್ಕೆ ಹೇಗೆ ಸಾಧ್ಯವೆಂದು ನಿತೀಶ್ ಕುಮಾರ್ ವಿರುದ್ಧ ಆರ್ಜೆಡಿ ನಾಯಕ ಮನೋಜ್ ಝಾ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬಿಹಾರ ಚುನಾವಣೆಯಲ್ಲಿ ಕೇವಲ 40 ಸ್ಥಾನಗಳನ್ನು ಗಳಿಸಿರುವವರು ಮುಖ್ಯಮಂತ್ರಿ ಆಗುವುದು ಹೇಗೆ ಸಾಧ್ಯವಾಗುತ್ತದೆ,ಜನರ ಆದೇಶವು ಅವರ ವಿರುದ್ಧವಾಗಿದೆ. 2017ರಲ್ಲಿ ಮಹಾಘಟ ಬಂಧನ್ ದಿಂದ ಹೊರಹೋಗಿ ಎನ್ಡಿಎ ಜೊತೆ ಸೇರುವ ಮೂಲಕ ಜನರ ಆದೇಶವನ್ನು ನಿತೀಶ್ ಕುಮಾರ್ ದಿಕ್ಕರಿಸಿದರು. ಆದರೆ, ಬಿಹಾರದ ಜನರು ಈಗ ಎಚ್ಚರಗೊಂಡಿದ್ದಾರೆ' ಎಂದು ಹೇಳಿದ್ದಾರೆ
ಇನ್ನುಕೇವಲ 40 ಸ್ಥಾನಗಳನ್ನು ಹೊಂದಿರುವ ವ್ಯಕ್ತಿಯು ಮುಂದಿನ ಮುಖ್ಯಮಂತ್ರಿಯಾಗಲು ನೋಡುತ್ತಿದ್ದಾರೆ. ಅವರೀಗ ಬಿಜೆಪಿಯ ನಿಯಂತ್ರಣದಲ್ಲಿದ್ದಾಈ ಹಾಗಾಗಿ ನಿತೀಶ್ ಅವರಿಗೆ ಬೇರೆ ದಾರಿ ಇಲ್ಲ ಎಂದರು.