ಗ್ವಾಲಿಯರ್, ನ.15 (DaijiworldNews/HR): ಪೊಲೀಸ್ ಅಧಿಕಾರಿಯೊಬ್ಬರು ಹದಿನೈದು ವರ್ಷಗಳ ಹಿಂದೆ ನಾಪತ್ತೆಯಾಗಿದ್ದು, ಇದೀಗ ಅವರನ್ನು ಆಕಸ್ಮಿಕವಾಗಿ ಇಬ್ಬರು ಸಹೋದ್ಯೋಗಿಗಳು ಗ್ವಾಲಿಯರ್ ಫುಟ್ಪಾತ್ನಲ್ಲಿ ಪತ್ತೆ ಮಾಡಿದ್ದಾರೆ.
ಡಿವೈಎಸ್ಪಿಗಳಾದ ರತ್ನೇಶ್ ಸಿಂಗ್ ಥೋಮರ್ ಮತ್ತು ವಿಜಯ್ ಬಹದ್ದೂರ್ ಎಂಬುವವರು ಗ್ವಾಲಿಯರ್ ನಗರದ ಕಲ್ಯಾಣ ಮಂಟಪವೊಂದರ ಎದುರು ವಾಹನದಲ್ಲಿ ಹೋಗುತ್ತಿದ್ದಾಗ ಭಿಕ್ಷುಕನಂತೆ ಒಬ್ಬ ವ್ಯಕ್ತಿಯನ್ನು ಕಂಡರು. ಚಳಿಯಿಂದ ನಡುಗುತ್ತಿದ್ದು ಇದನ್ನು ನೋಡಿದ ಇಬ್ಬರು ಅಧಿಕಾರಿಗಳ ಪೈಕಿ ಒಬ್ಬರು ತಮ್ಮ ಜಾಕೆಟ್ ತೆಗೆದು ಕೊಟ್ಟರು. ಅವರ ಹೆಸರಿನಿಂದ ಆ ವ್ಯಕ್ತಿ ಕರೆದಾಗ ಅವರಿಗೆ ಅಚ್ಚರಿಯಾಯಿತು ಎಂದು ಥೋಮರ್ ವಿವರಿಸಿದ್ದಾರೆ.
2005ರಲ್ಲಿ ದಾಟಿಯಾದಲ್ಲಿ ಇನ್ಸ್ಪೆಕ್ಟರ್ ಆಗಿದ್ದ ಮಿಶ್ರಾ ನಾಪತ್ತೆಯಾಗಿದ್ದರು. ಇದೀಗ ಇಬ್ಬರೂ ಅಧಿಕಾರಿಗಳು ತಮ್ಮ ಮಾಜಿ ಸಹೋದ್ಯೋಗಿಗಳನ್ನು ಸ್ಥಳೀಯ ಸ್ವಯಂಸೇವಾ ಸಂಸ್ಥೆಯೊಂದು ನಡೆಸುವ ಆಶ್ರಮಕ್ಕೆ ಕರೆದೊಯ್ದು ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದಾರೆ.