ಪಾಟ್ನಾ, ನ.15 (DaijiworldNews/HR): ಬಿಹಾರದ ಹೊಸ ಶಾಸಕರ ಉಸ್ತುವಾರಿ ವಹಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಬಿಜೆಪಿ ನೇಮಕ ಮಾಡಿದ್ದು, ಇಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡಲಿದ್ದಾರೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಹೊಸ 74 ಶಾಸಕರ ಸಭೆ ಇಂದು ಬೆಳಗ್ಗೆ 10 ಗಂಟೆಗೆ ನಡೆಯಲಿದ್ದು, ಪಾಟ್ನಾಕ್ಕೆ ರಾಜನಾಥ್ ಸಿಂಗ್ ಆಗಮಿಸಲಿದ್ದಾರೆ.
ಇನ್ನು ಈ ಸಭೆಯ ಬಳಿಕ ಎನ್ಡಿಎ ಮೈತ್ರಿಕೂಟದ ಮತ್ತೊಂದು ಸಭೆ ನಡೆಯಲಿದ್ದು ಬಿಹಾರ ಮುಖ್ಯಮಂತ್ರಿಗಳ ಪದಗ್ರಹಣ ಸಮಾರಂಭ ಮತ್ತು ಸರ್ಕಾರ ರಚನೆಯ ಕುರಿತು ಚರ್ಚೆ ನಡೆಯಲಿದೆ.
ಸಭೆ ಬಳಿಕ ಕಾಮೇಶ್ವರ್ ಚೌಪಲ್ ಅವರು ನೂತರ ಉಪ ಮುಖ್ಯಮಂತ್ರಿಯಾಗುತ್ತಾರ ಅಥವಾ ಸುಶಿಲ್ ಕುಮಾರ್ ಮೋದಿಯವರನ್ನು ಮುಂದುವರಿಸುವುದೇ ಎಂಬ ಬಗ್ಗೆ ತಿಳಿದು ಬರಲಿದೆ.