ತುಮಕೂರು,ನ.15 (DaijiworldNews/HR): ಶನಿವಾರ ನಡುರಾತ್ರಿ ಬಿ.ಎಚ್.ರಸ್ತೆಯಲ್ಲಿರುವ ಸೆಂಚುರಿ ಹೋಂಡಾ ಶೋ ರೂಂನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 65ಕ್ಕೂ ಹೆಚ್ಚು ಬೈಕ್ಗಳು ಭಸ್ಮವಾಗಿ, 15 ಕಂಪ್ಯೂಟರ್ಗಳು, ಪೀಠೋಪಕರಣಗಳು ಆಹುತಿ ಆಗಿವೆ ಎಂದು ತಿಳಿದು ಬಂದಿದೆ.
ಈ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ, ಘಟನೆಯಿಂದ ಎರಡೂವರೆ ಕೋಟಿ ನಷ್ಟ ಸಂಭವಿಸಿದೆ ಎಂದು ಶೋ ರೂಂ ಮಾಲೀಕ ಪ್ರವೀಣ್ ತಿಳಿಸಿದ್ದಾರೆ.
ಇನ್ನು ರಾತ್ರಿಯೇ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ ಬೈಕ್ಗಳು ಪೂರ್ಣವಾಗಿ ಭಸ್ಮವಾಗಿವೆ ಎಂದು ತಿಳಿದು ಬಂದಿದೆ.