ಬುಲಂದ್ಶಹರ್,ನ.15 (DaijiworldNews/HR): ಮಧ್ಯಪ್ರದೇಶದ ಹಿರಿಯ ಬಿಜೆಪಿ ನಾಯಕ ಕೈಲಾಶ್ ಸಾರಂಗ್ (85) ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಶನಿವಾರ ರಾತ್ರಿ ಮುಂಬೈ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೈಲಾಶ್ ಸಾರಂಗ್ ಅವರನ್ನು ಮುಂಬೈನ ಆಸ್ಪತ್ರೆಯೊಂದಕ್ಕೆ 12 ದಿನಗಳ ಹಿಂದೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗಿದೇ ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ.
ಕೈಲಾಶ್ ಸಾರಂಗ್ ಅವರ ಸಾವಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದು, ", ಮಧ್ಯಪ್ರದೇಶದಲ್ಲಿ ಬಿಜೆಪಿ ಬಲವರ್ಧನೆಗೆ ಕೈಲಾಶ್ ಸಾರಂಗ್ ಜೀ ಅವರು ಶ್ರಮ ವಹಿಸಿದ್ದರು. ಮಧ್ಯಪ್ರದೇಶದ ಏಳಿಗೆಗೆ ಸದಾದುಡಿಯುತ್ತಿದ್ದ ಮತ್ತು ಕಠಿಣ ಕೆಲಸ ಮಾಡುವ ನಾಯಕರಾಗಿಯೇ ನಮ್ಮ ನಡುವೆ ಅವರು ಉಳಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.