ನವದೆಹಲಿ, ನ. 14 (DaijiworldNews/MB) : ವಿವಿಧ ರೈತ ಸಂಘಟನೆಗಳೊಂದಿಗಳು ಕೇಂದ್ರ ಸರ್ಕಾರದೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿದ್ದು ಕೇಂದ್ರದ ವಿವಿದಾತ್ಮಕ ಕಾಯ್ದೆಗಳ ವಿರುದ್ದ ಕಳೆದ ಹಲವಾರು ದಿನಗಳಿಂದ ಪ್ರತಿಭಟನೆಯನ್ನು ರೈತರು ಮುಂದುವರಿಸಿದ್ದಾರೆ.
ಶುಕ್ರವಾರ ರಾಜಧಾನಿ ದೆಹಲಿಯಲ್ಲಿ ವಿವಿಧ ರೈತ ಸಂಘಟನೆಗಳು, ಪಂಜಾಬ್ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಕೇಂದ್ರ ಕೃಷಿ ಮತ್ತು ರೈಲ್ವೆ ಸಚಿವರ ನಡುವೆ ಸುಮಾರು ಏಳು ಗಂಟೆಗಳ ಕಾಲ ಮಾತುಕತೆ ನಡೆಸಿದೆ.
ಆದರೆ ಈ ಮಾತುಕತೆಗಳು ವಿಫಲವಾಗಿದ್ದು ಕಳೆದ ಹಲವಾರು ದಿನಗಳಿಂದ ಈ ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಮುಂದುವರಿಸಲು ರೈತ ಮುಖಂಡರು ನಿರ್ಧರಿಸಿದ್ದಾರೆ.
ಈ ಹಿಂದೆಯೇ ನಿಗದಿ ಪಡಿಸಲಾಗಿರುವಂತೆ ನವೆಂಬರ್ 26 ಹಾಗೂ 27ರಂದು ದೆಹಲಿ ಚಲೋ ಯಾತ್ರೆ ನಡೆಯಲಿದೆ. ನವೆಂಬರ್ 18 ರಂದು ಚಂಡೀಗಢದಲ್ಲಿ ರೈತ ಸಂಘಟನೆಗಳು ತಮ್ಮ ಮುಂದಿನ ನಡೆಗಳ ಬಗ್ಗೆ ಚರ್ಚೆ ನಡೆಸಲಿವೆ.