ರಾಂಚಿ,ನ.14 (DaijiworldNews/HR): ಜಾರ್ಖಂಡ್ನ ರಾಂಚಿಯಲ್ಲಿ ಮಾಂತ್ರಿಕನ ಮಾತನ್ನು ನಂಬಿ ತಂದೆಯೇ ತನ್ನ ಸ್ವತಃ ಆರು ವರ್ಷದ ಹೆಣ್ಣು ಮಗುವಿನ ಕತ್ತನ್ನು ಕತ್ತರಿಸಿ ಬಲಿಕೊಟ್ಟಿರುವ ಘಟನೆ ನಡೆದಿದೆ.
ಗಂಡು ಮಗುವಾಗಬೇಕಿದ್ದರೆ ಹೆಣ್ಣು ಮಗುವನ್ನು ಬಲಿಕೊಡಬೇಕೆಂದು ಮಾಂತ್ರಿಕ ಹೇಳಿದ್ದನ್ನು ನಂಬಿ ಸುಮನ್ ನೆಗಾಸಿಯಾ(26) ಎಂಬಾತ ತನ್ನ ಮಗಳನ್ನು ಬಲಿಕೊಟ್ಟಿದ್ದಾನೆ.
ಇನ್ನು ಮಗಳನ್ನು ಬಲಿ ಕೊಡುವ ಸಂದರ್ಭದಲ್ಲಿ ಈತನ ಪತ್ನಿ ತವರು ಮನೆಗೆ ಹೋಗಿರುವುದಾಗಿ ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಪೆಶ್ರಾರ್ ಪೊಲೀಸರು ಆರೋಪಿ ಸುಮನ್ ನನ್ನು ಬಂಧಿಸಿದ್ದು, ಬಲಿ ಕೊಡಲು ಹೇಳಿದ ಮಾಂತ್ರಿಕನಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ತನಿಖೆ ಮುಂದುವರಿದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.