ಮುಂಬೈ, ನ.14 (DaijiworldNews/HR): ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ತಮ್ಮ ಆತ್ಮಚರಿತ್ರೆಯ ಪುಸ್ತಕದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕುರಿತು ಉಲ್ಲೇಖಿಸಿರುವ ಹೇಳಿಕೆಗೆ ಶಿವಸೇನಾ ವಕ್ತಾರ ಸಂಜಯ್ ರಾವತ್ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ಭಾರತ ರಾಜಕೀಯ ನಾಯಕರ ಬಗ್ಗೆ ಬೇರೆ ದೇಶದ ರಾಜಕಾರಣಿಯೊಬ್ಬರು ಅವರ ಪುಸ್ತಕದಲ್ಲಿ ಇಂತಹ ಹೇಳಿಕೆಗಳನ್ನು ನೀಡುವುದು ತಪ್ಪು, ಒಬಾಮ ಅವರಿಗೆ ನಮ್ಮ ದೇಶದ ಬಗ್ಗೆ ಎಷ್ಟು ತಿಳಿದಿದೆ ಎಂದು ಪ್ರಶ್ನಿಸಿದ್ದಾರೆ".
ಇನ್ನು ಬರಾಕ್ ಒಬಾಮ ಅವರು ತಮ್ಮ ಆತ್ಮಚರಿತ್ರೆ 'ಎ ಪ್ರಾಮಿಸ್ಡ್ ಲ್ಯಾಂಡ್' ಕೃತಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಾಹುಲ್ ಗಾಂಧಿ ಅವರ ಕುರಿತು ಉಲ್ಲೇಖಿಸಿದ್ದು, "ರಾಹುಲ್ ಗಾಂಧಿ ಅವರು ಪುಕ್ಕಲು ಮತ್ತು ಅಸ್ಥಿರ ಗುಣಗಳನ್ನು ಹೊಂದಿದ್ದಾರೆ. ಅವರು ಅಭ್ಯಾಸ ಮಾಡುವ ವಿದ್ಯಾರ್ಥಿಯಂತೆ ಇದ್ದಾರೆ. ಹಾಗೆಯೇ ಶಿಕ್ಷಕರನ್ನು ಮೆಚ್ಚಿಸಲು ಉತ್ಸುಕರಾಗಿರುವ ವಿದ್ಯಾರ್ಥಿಯಂತೆ ಇದ್ದಾರೆ. ಆದರೆ ಆಳಕ್ಕೆ ಇಳಿದರೆ ಅವರಿಗೆ ವಿಷಯವನ್ನು ಕರಗತ ಮಾಡಿಕೊಳ್ಳುವ ಉತ್ಸಾಹ ಅಥವಾ ಒಲವು ಇಲ್ಲ'' ಎಂದು ಬರೆದಿದ್ದರು.