ಪುಣೆ, ನ.14 (DaijiworldNews/PY): ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅಸ್ಟ್ರಾಜೆನೆಕಾದ ಕೊರೊನಾ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಯೋಜಿಸುತ್ತಿದೆ. ಏಕೆಂದರೆ, ಇದು ಡಿಸೆಂಬರ್ ವೇಳೆಗೆ 100 ಮಿಲಿಯನ್ ಡೋಸ್ಗಳನ್ನು ಸಿದ್ಧಪಡಿಸುವ ಗುರಿ ಹೊಂದಿದೆ.
ಸಾಂದರ್ಭಿಕ ಚಿತ್ರ
"ಆಸ್ಟ್ರಾಜೆನೆಕಾ ಕಂಪನಿಯ ಕೊರೊನಾ ಲಸಿಕೆಯು ಇದೀಗ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ನಲ್ಲಿದೆ. ಈ ಲಸಿಕೆಯಿಂದ ಕೊರೊನಾ ಸೋಂಕು ನಿಯಂತ್ರಣವಾಗುತ್ತದೆ ಎಂದು ತಿಳಿದರೆ ಸಂಸ್ಥೆಯು ಮುಂದಿನ ತಿಂಗಳು ನವದೆಹಲಿಯಿಂದ ತುರ್ತು ಅನುಮತಿಯನ್ನು ಪಡೆಯಬಹುದು" ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದರ್ ಪೂನಾವಾಲಾ ತಿಳಿಸಿದ್ದಾರೆ.
"ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅಸ್ಟ್ರಾಜೆನೆಕಾ ಜೊತೆ 100 ಕೋಟಿ ಡೋಸ್ಗಳನ್ನು ತಯಾರಿಸಲು ಒಪ್ಪಂದ ಮಾಡಿಕೊಂಡಿದ್ದು, ಎರಡು ತಿಂಗಳಿನಲ್ಲಿ ಸುಮಾರು ನಾಲ್ಕು ಕೋಟಿ ಡೋಸ್ಗಳನ್ನು ಉತ್ಪಾದಿಸಿದೆ" ಎಂದಿದ್ದಾರೆ.
"ಲಸಿಕೆಯು ಈ ವರ್ಷಾಂತ್ಯದಲ್ಲಿ ಲಭ್ಯವಾದರೂ ಕೂಡಾ, ಲಸಿಕೆಯನ್ನು ನೀಡಲು ಎರಡೂವರೆ ವರ್ಷ ಬೇಕಾಗುತ್ತದೆ. ಅಲ್ಲದೇ, ಲಸಿಕೆ ನೀಡಿದ ನಂತರ ಸೋಂಕು ನಿಯಂತ್ರಣಕ್ಕೆ ಇನ್ನೂ ಎರಡು ವರ್ಷಗಳು ಬೇಕಾಗುತ್ತದೆ" ಎಂದು ತಿಳಿಸಿದ್ದಾರೆ.