ವಿಜಯಪುರ, ನ.14 (DaijiworldNews/HR): ನಾಗಠಾಣ ಶಾಸಕ ದೇವಾನಂದ ಚವ್ಹಾಣ ಅವರ ಮನೆಯ ಆವರಣದಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ಗರಗಸದಿಂದ ಕತ್ತರಿಸಿ ಕಳ್ಳತನ ಮಾಡಲು ಯತ್ನಸಿ ವಿಫಲವಾದ ಘಟನೆ ನಡೆದಿದೆ.
ಸಾಂಧರ್ಭಿಕ ಚಿತ್ರ
ಇಂದು ನಸುಕಿ ಜಾವ ಶಾಸಕರ ಮನೆಯ ಆವರಣದಲ್ಲಿ ಬೆಳೆದಿರುವ ಶ್ರೀಗಂಧದ ಮರವನ್ನು ಗರಗಸದಿಂದ ಕತ್ತರಿಸಿದ್ದು, ಈ ವೇಳೆ ಗರಗಸದ ಸದ್ದು ಕೇಳಿ ಮನೆಯಲ್ಲಿದ್ದವರನ್ನು ಎಚ್ಚರಿಸಿದೆ. ಆದರೆ ಅಷ್ಟರಲ್ಲಾಗಲೇ ಬುಡದಿಂದಲೇ ಕತ್ತರಿಸಿದ್ದ ಶ್ರೀಗಂಧದ ಮರ ಮುರಿದು ಕಾಂಪೌಂಡ್ ಗೋಡೆ ಮೇಲೆ ಬಿದ್ದಿದ್ದು, ಮನೆಯಲ್ಲಿದ್ದವರು ಹೊರ ಬರುವುದು ಕಂಡು ಬರುವಷ್ಟರಲ್ಲಿ ಕಳ್ಳರು ಶ್ರೀಗಂಧದ ಕತ್ತರಿಸಿದ ಮರವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಇನ್ನು ಈ ಕುರಿತು ಶಾಸಕ ದೇವಾನಂದ ಅವರು ಆದರ್ಶ ನಗರ ಠಾಣಾ ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗಳಿಗೆ ದೂರು ನೀಡಿದ್ದಾರೆ.