ಮಸ್ಕಿ, ನ.14 (DaijiworldNews/HR): ಮಸ್ಕಿ ಉಪಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆಯುವುದಿಲ್ಲ, ಈ ಬಾರಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ಗೆ ಸೋಲು ಶತಸಿದ್ಧ ಎಂದು ಕಾಂಗ್ರೆಸ್ ಮುಖಂಡ ಆರ್.ಸಿದ್ದನಗೌಡ ಹೇಳಿದ್ದಾರೆ.
ಈ ಕುರಿತು ಕಾರ್ಯಕರ್ತರ ಹಾಗೂ ಆರ್.ಬಸನಗೌಡ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, "ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಅಕ್ರಮ ಮತದಾನದ ಮೂಲಕ ಪ್ರತಾಪಗೌಡ ಪಾಟೀಲ್ ಆಯ್ಕೆಯಾಗಿದ್ದರು, ಆದರೆ ಈ ಉಪಚುನಾವಣೆಯಲ್ಲಿ ಮತದಾರರು ನ್ಯಾಯ ನೀಡುವ ಕಾಲ ಬಂದಿದೆ ಎಂದರು".
ಇನ್ನು ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಸ್ಥಾನಕ್ಕೆ ಪ್ರತಾಪಗೌಡ ಬಂದು ಸೇರಿದ್ದಾರೆ, ಹಾಗಾಗಿ ಮೂಲ ಬಿಜೆಪಿಗರಿಗೆ ಅನ್ಯಾಯವಾಗಿದೆ, ಆರ್. ಬಸನಗೌಡ ಅವರಿಗೆ ಕಾಡಾ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಕಾರ್ಯಕರ್ತರ ಹಿತಕ್ಕಾಗಿ ಕಾಡಾ ಅಧ್ಯಕ್ಷ ಹಾಗೂ ಬಿಜೆಪಿಗೆ ರಾಜಿನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ ಎಂದು ತಿಳಿಸಿದರು.