ನವದೆಹಲಿ, ನ.14 (DaijiworldNews/PY): ಪಾಕಿಸ್ತಾನ ಸೇನೆಯು ಶುಕ್ರವಾರ ಎಲ್ಒಸಿ ಯುದ್ದಕ್ಕೂ ನಡೆಸಿದ ಅಪ್ರಚೋದಿತ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಕದನ ವಿರಾಮ ಉಲ್ಲಂಘಿಸಿದ ಪಾಕ್ಗೆ ತಕ್ಕ ಉತ್ತರ ನೀಡಿರುವ ಭಾರತೀಯ ಸೈನಿಕರು ಪ್ರತಿ ದಾಳಿ ನಡೆಸಿ ಪಾಕ್ನ 11 ಸೈನಿಕರನ್ನು ಸದೆಬಡೆದಿದ್ದು, ಪಾಕ್ನ ಶಿಬಿರಗಳು ಸೇರಿದಂತೆ ಬಂಕರ್ಗಳನ್ನು ನಾಶಪಡಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಆದರೆ ಪಾಕಿಸ್ತಾನವು, ನಮ್ಮ ಸೈನ್ಯದಲ್ಲಿ ಕೇವಲ ಓರ್ವ ಯೋಧ ಮಾತ್ರ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ನಾಲ್ವರು ನಾಗರಿಕರು ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದೆ. ಅಲ್ಲದೇ, ಈ ಘಟನೆಯ ಬಗ್ಗೆ ಪಾಕ್ನಲ್ಲಿರುವ ಭಾರತೀಯ ರಾಯಭಾರಿಗೆ ಸಮನ್ಸ್ ನೀಡಿದೆ.
ಪಾಕ್ ಸೈನ್ಯವು ಕದನ ವಿರಾಮ ಉಲ್ಲಂಘಿಸಿ ದಾವಾರ್, ಕೇರನ್, ಉರಿ, ನೌಗಾಮ್ ಸೇರಿದಂತೆ ಹಲವು ಪ್ರದೇಶಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿತ್ತು. ಭಾರತೀಯ ಸೇನೆಯ ಮುಂಚೂಣಿ ನೆಲೆಗಳ ಮೇಲೆ ಹಾಗೂ ಗಡಿ ಗ್ರಾಮಗಳನ್ನು ಗುರಿಯಾಗಿಸಿಕೊಂಡಿದ್ದ ಪಾಕ್ ಸೈನ್ಯವು ಶೆಲ್ ದಾಳಿಯನ್ನು ನಡೆಸಿತ್ತು. ಪಾಕ್ ನಡೆಸಿದ ಏಕಾಏಕಿ ದಾಳಿಗೆ ಬಿಎಸ್ಎಫ್ ಸಬ್ಇನ್ಸ್ಪೆಕ್ಟರ್ ಸೇರಿ ನಾಲ್ವರು ಸೈನಿಕರು ಹುತಾತ್ಮರಾಗಿದ್ದು, ಆರು ಮಂದಿ ನಾಗರಿಕರು ಕೂಡಾ ಮೃತಪಟ್ಟಿದ್ದರು.
ಪಾಕ್ನ ಈ ದಾಳಿಗೆ ಪ್ರತಿ ದಾಳಿ ನಡೆಸಿರುವ ಭಾರತೀಯ ಸೇನೆ ಪಾಕ್ನ 11 ಸೈನಿಕರನ್ನು ಹತ್ಯೆಗೈದಿದ್ದು ಅಲ್ಲದೇ, ಪಾಕ್ನ ಶಿಬಿರಗಳು ಸೇರಿದಂತೆ ಬಂಕರ್ಗಳನ್ನು ನಾಶಪಡಿಸಿದೆ.