ರೂರ್ಕೆಲಾ, ನ.14 (DaijiworldNews/HR): 20 ವರ್ಷಗಳ ಕಾಲ ಪಾಕಿಸ್ತಾನ ಜೈಲಿನಲ್ಲಿದ್ದ ಬುಡಕಟ್ಟು ಜನಾಂಗದ ಬ್ರಿಜು ಕುಲು(50)ಎಂಬ ವ್ಯಕ್ತಿ ಇಡಿಅಗ ಬಿಡುಗಡೆಗೊಂಡು ತನ್ನ ಹುಟ್ಟೂರಿಗೆ ವಾಪಸಾಗಿದ್ದಾರೆ.
ಬ್ರಿಜು ಕುಲು ಅವರನ್ನು ಸಾಂಪ್ರದಾಯಿಕ ಬುಡಕಟ್ಟು ನೃತ್ಯ, ಸಂಗೀತ ಮತ್ತು ಡ್ರಮ್ಸ್ ಮತ್ತು ಇತರ ವಾದ್ಯಗಳೊಂದಿಗೆ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಸ್ವಾಗತಿಸಿದರು.
ಕುಲು ಅವರು ತನ್ನ 25ನೇ ವಯಸ್ಸಿನಲ್ಲಿ ಮನೆ ಬಿಟ್ಟು ಬಂದು ಪಂಜಾಬ್ಗೆ ತೆರಳುವಾಗ ಪಾಕಿಸ್ತಾನದ ಭೂಪ್ರದೇಶವನ್ನು ತಪ್ಪಾಗಿ ದಾಟಿದ್ದರಿಂದ ಪಾಕಿಸ್ತಾನದಲ್ಲಿ ಜೈಲು ಪಾಲಾಗಿದ್ದರು.
ಲಾಹೋರ್ ಜೈಲಿನಿಂದ ಬಿಡುಗಡೆಯಾದ ನಂತರ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ಬುಡಕಟ್ಟು ಪ್ರಾಬಲ್ಯದ ಸುಂದರ್ಗ ಜಿಲ್ಲೆಯ ಕುತ್ರಾ ಬ್ಲಾಕ್ನ ಕಟಂಗಾ ಗ್ರಾಮವನ್ನು ತಲುಪುತ್ತಿದ್ದಾಗ ಕುಲು ಅವರಿಗೆ ಸ್ಥಳೀಯ ನಿವಾಸಿಗಳು ಅದ್ದೂರಿ ಸ್ವಾಗತ ಕೋರಿದ್ದಾರೆ.
ಇನ್ನು ಕುಲು ಅವರ ಹೆತ್ತವರು ಮೃತಪಟ್ಟಿದ್ದಾರೆ. ಆದರೆ ಅವರ ಬಿಡುಗಡೆಯ ಬಗ್ಗೆ ಮಾಹಿತಿ ತಿಳಿದು ಅವರ ತಂದೆಯ ಚಿಕ್ಕಪ್ಪ ಮತ್ತು ಚಿಕ್ಕಮ್ಮ, ಸಹೋದರಿ ಮತ್ತು ಅವರ ಕುಟುಂಬದವರು ಅವರ ಬರುವಿಕೆಗಾಗಿ ಕಾಯುತ್ತಿದ್ದರು.